ಸೂಪರ್ ಸ್ಟಾರ್ ಪಕ್ಕದಲ್ಲಿ ಸೆಂಚುರಿ ಸ್ಟಾರ್ ನಟಿಸುವುದು ಪಕ್ಕಾ – ಖಚಿತಪಡಿಸಿದ ಶಿವಣ್ಣ..
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 169 ಚಿತ್ರದಲ್ಲಿ ತಲೈವ ಜೊತೆಗೆ ಸೆಂಚುರಿ ಸ್ಟಾರ್ ಶಿವಣ್ಣ ಸಿನಿಮಾ ಮಾಡ್ತಿದ್ದಾರೆ ಅನ್ನೋ ವಿಚಾರ ಹಲವು ದಿನಗಳಿಂದ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು ಇದೀಗ ಆ ಸುದ್ದಿಗೆ ರೆಕ್ಕ ಪುಕ್ಕ ಸಿಕ್ಕಿದೆ.
ಇದೀಗ ರಜನಿ 169ನೇ ಚಿತ್ರದಲ್ಲಿ ಶಿವಣ್ಣ ರಜನಿಕಾಂತ್ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗ್ತಿದೆ.. ನೆಲ್ಸನ್ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ಶಿವಣ್ಣ ನಟಸುವುದು ಖಚಿತ ಎನ್ನುವುದನ್ನ ಸ್ವತಃ ಶಿವಣ್ಣ ಖಚಿತಪಡಿಸಿದ್ದಾರೆ.
ನಟ ಶಿವರಾಜ್ ಕುಮಾರ್ ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸ್ಕ್ರಿಪ್ಟ್ ಇಷ್ಟವಾಯಿತು ಮತ್ತು ರಜನಿಕಾಂತ್ ಜೊತೆ ತೆರೆ ಹಂಚಿಕೊಳ್ಳಲು ಖುಷಿಯಾಗುತ್ತಿದೆ ಎಂದು ಶಿವರಾಜಕುಮಾರ್ ತಮ್ಮ ಖುಷಿ ಹಂಚಿಕೊಂಡಿದ್ದಾರೆ.
ರಜನಿಕಾಂತ್ ಜೊತೆಗೆ ನಟಿಸಲು ಯಾರಿಗಾದರೂ ಅವಕಾಶ ಸಿಕ್ಕರೇ ಅದು ಅದೃಷ್ಟ, ಈ ಸಿನಿಮಾದಿಂದ ಇದು ಸಾಧ್ಯವಾಗಿದೆ. ಬಾಲ್ಯದಿಂದಲೂ ಅವರಿಗೆ ನನ್ನ ನನ್ನ ಬಗ್ಗೆ ತಿಳಿದಿದೆ. ನಾನು ಹಿರಿಯ ನಟರೊಂದಿಗೆ ವಿಶೇಷ ಬಾಂಧವ್ಯವನ್ನು ಹೊಂದಿದ್ದೇನೆ. ಈ ಚಿತ್ರದ ಭಾಗವಾಗಲು ನನಗೆ ಖುಷಿಯಾಗಿದೆ. ಬೆಳ್ಳಿತೆರೆಯಲ್ಲಿ ರಜನಿ ಸರ್ ಮತ್ತು ನನ್ನನ್ನು ಒಟ್ಟಿಗೆ ನೋಡಲು ಅಭಿಮಾನಿಗಳು ಇಷ್ಟಪಡುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ಶಿವಣ್ಣ ತಿಳಿಸಿದ್ದಾರೆ.








