ಎತ್ತುಗಳ ಜೊತೆ ಬಂದ ಅಭಿಮಾನಿಗಳನ್ನ ಭೇಟಿಯಾದ ಶಿವಣ್ಣ
ಬೆಂಗಳೂರು : ಪುನೀತ್ ರಾಜ್ ಕುಮಾರ್ ಅವರ ಅಕಾಲಿನ ನಿಧನದ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಒಬ್ಬ ಕಲಾವಿದನಾಗಿ ಸಾಕಷ್ಟು ಹೆಸರು, ಸಾಧನೆ ಮಾಡಿರುವ ಅಪ್ಪು, ಮಾನವೀಯತೆಯ ಗುಣಗಳ ಮೂಲಕವೂ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಹೀಗಾಗಿಯೇ ಪುನೀತ್ ನಿಧನದ ನಂತರ ದಕ್ಷಿಣ ಭಾರತದ ಸಾಕಷ್ಟು ನಟರು ಕಂಬನಿ ಮಿಡಿದಿದ್ದಾರೆ.
ಇತ್ತ ಅಭಿಮಾನಿಗಳು ಕೂಡ ಪುನೀತ್ ಸಮಾಧಿ ಬಳಿಗೆ ಭೇಟಿ ನೀಡುತ್ತಿದ್ದಾರೆ.
ಅಂತೆಯೇ ಪಾವಗಡದಿಂದ ಎತ್ತುಗಳ ಜೊತೆ ಅಪ್ಪು ಸಮಾಧಿ ಬಳಿಗೆ ಬಂದ ಅಭಿಮಾನಿಗಳನ್ನು ಶಿವಣ್ಣ ಹಾಗೂ ರಾಘಣ್ಣ ಭೇಟಿ ಮಾಡಿದ್ದಾರೆ.
ಅಪ್ಪು ಸಮಾಧಿಯನ್ನು ನೋಡಲು ಪಾವಗಡದಿಂದ ಎತ್ತುಗಳ ಜೊತೆ ಆಗಮಿಸಿದ್ದರು.
ಅಪ್ಪು ಸಮಾಧಿಯ ದರ್ಶನ ಪಡೆದ ಬಳಿಕ ಶಿವಣ್ಣನನ್ನ ಬೇಟಿಯಾಗದೇ ಇಲ್ಲಿಂದ ತೆರಳಲ್ಲ ಎಂದು ಪಟ್ಟು ಹಿಡಿದಿದ್ದರು.
ಈ ಬಗ್ಗೆ ತಿಳಿದ ಶಿವಣ್ಣ ಕೂಡಲೇ ಆ ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ.
ಈ ವೇಳೆ ಅಭಿಮಾನಿಗಳು ಶಿವಣ್ಣನ ಕಾಲಿಗೆ ನಮಸ್ಕರಿಸಿದ್ದಾರೆ. ಇತ್ತ ಶಿವಣ್ಣ ಎತ್ತುಗಳನ್ನ ಮುಟ್ಟಿ ನಮಸ್ಕರಿಸಿದ್ದಾರೆ.