ಸಿಎಂ ಬದಲಾವಣೆ ನೂರಕ್ಕೆ ನೂರು ಆಗುತ್ತೆ: ಶಿವರಾಜ್ ತಂಗಡಗಿ
ಕೊಪ್ಪಳ: ಈ ರಾಜ್ಯಕ್ಕೆ ಇನ್ನು ಇಬ್ಬರು ಮುಖ್ಯಮಂತ್ರಿ ಬರ್ತಾರೆ. ಸಿಎಂ ಬದಲಾವಣೆ ನೂರಕ್ಕೆ ನೂರು ಆಗುತ್ತೆ ಎಂದು ಕಾಂಗ್ರೆಸ್ ಮಾಜಿ ಸಚಿವ ಶಿವರಾಜ್ ತಂಗಡಗಿ ಬಾಂಬ್ ಹಾಕಿದ್ದಾರೆ.
ಬಿಟ್ ಕಾಯಿನ್ ವಿಚಾರವಾಗಿ ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಹಾಗೇ ಜನವರಿ ಅಂತ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ನಿಶ್ಚಿತ ಎಂದು ಬಾಂಬ್ ಸಿಡಿಸಿದರು.
ನಿಶ್ಚಿತವಾಗಿ ಇನ್ನೂ ಒಂದೂವರೆ ವರ್ಷದಲ್ಲಿ ಇಬ್ಬರು ಮುಖ್ಯಮಂತ್ರಿಗಳಾಗ್ತಾರೆ.
ಈ ರಾಜ್ಯಕ್ಕೆ ಇನ್ನು ಇಬ್ಬರು ಮುಖ್ಯಮಂತ್ರಿ ಬರ್ತಾರೆ. ಸಿಎಂ ಬದಲಾವಣೆ ನೂರಕ್ಕೆ ನೂರು ಆಗುತ್ತೆ.
ಬೊಮ್ಮಾಯಿ ಅವರನ್ನ ಬಿಟ್ಟು ಇನ್ನು ಒಬ್ಬರು ಸಿಂ ಆಗ್ತಾರೆ. ಅವರಿಗೆ ಸಿಂಗಲ್ ಆಗಿ ಆಳ್ವಿಕೆ ಮಾಡೋಕೆ ಬರಲ್ಲ ಎಂದು ಶಿವರಾಜ್ ತಂಗಡಗಿ ಗುಡುಗಿದರು.
ಇನ್ನು ಬಿಜೆಪಿ ಸರ್ಕಾರದಲ್ಲಿ ಹಿಂದೆ ಮೂರು ಜನ ಸಿಎಂ ಆಗಿದ್ದರು.
ಈ ಬಾರಿ ನಾಲ್ವರು ಆಗಬಹುದು ಎಂದು ವ್ಯಂಗ್ಯವಾಡಿದ ತಂಗಡಗಿ, ಬಿಜೆಪಿ ಆಡಳಿತ ಮಾಡೋಕೆ ಸಮರ್ಥರಿಲ್ಲ ಎಂದು ಟೀಕಿಸಿದರು.









