ನಂದಕಿಶೋರ್ ಸಾರಥ್ಯದ ಸಿನಿಮಾದಲ್ಲಿ ಶಿವಣ್ಣನ ಜೊತೆ ನಿಖಿಲ್..!
ನಂದಕಿಶೋರ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಂಬೋದಲ್ಲಿ ಸಿನಿಮಾ ತಯಾರಾಗಲಿದೆ. ಬಿಗ್ ಬಜೆಟ್ ನ ಈ ಸಿನಿಮಾ ಸ್ಯಾಂಡಲ್ ವುಡ್ ಅಷ್ಟೇ ಕಾಲಿವುಡ್ ನಲ್ಲೂ ಧಮಾಕಾ ಎಬ್ಬಿಸಲಿದೆ ಎನ್ನೋ ಹೊತ್ತಿನಲ್ಲಿ ಮತ್ತಯೊಂದು ಇಂಟ್ರೆಸ್ಟಿಂಗ್ ಫ್ಯಾಕ್ಟ್ ರಿವೀಲ್ ಆಗಿದೆ.
ಹೌದು ಈ ಸಿನಿಮಾದಲ್ಲಿ ನಿಖಿಲ್ ಕುಮಾರಸ್ವಾಮಿ ಶಿವಣ್ಣನ ಜೊತೆಗೆ ಮೊಟ್ಟ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ ಎನ್ನೋ ಕುತೂಹಲ ಕಾರಿ ಮಾಹಿತಿ ಹೊರಬಿದ್ದಿದೆ. ಆದ್ರೆ ಇನ್ನೂವರೆಗೂ ಅಧಿಕೃತವಾಗಿ ಅನೌನ್ಸ್ ಆಗಿಲ್ಲ. ಏಪ್ರಿಲ್ 24 ರಂದು ಡಾ. ರಾಜ್ ಕುಮಾರ್ ಅವರ ಹುಟ್ಟುಹಬ್ಬವಿದ್ದು, ಅಂದು ಅಧಿಕೃತನವಾಗಿ ಘೋಷಣೆಯಾಗುವ ಸಾಧ್ಯತೆಯಿದೆ. ಸಿನಿಮಾಗೆ ಗೌತಮ್ ರೆಡ್ಡಿ, ಕೃತಿ ಚಿಲ್ಕುರಿ ಮತ್ತು ವಿವೇಕ್ ರೆಡ್ಡಿ ಬಂಡವಾಳ ಹೂಡುತ್ತಿದ್ದು, ಪ್ರಿಯ ದರ್ಶಿನಿ ರಾಮ್ ಕಥೆ ಬರೆದಿದ್ದಾರೆ.
ಸದ್ಯ ಶಿವಣ್ಣ ಅವರ ನಟನೆಯ ಭಜರಂಗಿ 2 ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಇದರ ಬೆನ್ನಲ್ಲೇ ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್ ಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಹರ್ಷ ಅವರ ಸಾರಥ್ಯದಲ್ಲಿಯೇ ಮತ್ತೊಂದು ಸಿನಿಮಾ ಮಾಡುತ್ತಿರೋದಾಗಿ ಇತ್ತೀಚೆಗೆಗೆ ಘೋಷಣೆ ಮಾಡಿದ್ದರು. ಟೈಟಲ್ ಕೂಡ ರಿವೀಲ್ ಮಾಡಲಾಗಿತ್ತು. ವೇದ ಅನ್ನೋ ಟೈಟಲ್ ನಲ್ಲಿ ಶಿವಣ್ಣನ ಲುಕ್ ಅಭಿಮಾನಿಗಳ ಮನಗೆದ್ದಿತ್ತು.
ಯುವರತ್ನ ಸಿನಿಮಾ ನೋಡಿ ಆ ಮಾತು ಹೇಳಿದ್ದೇಕೆ ರಕ್ಷಿತ್..!
ಒಂದು ವರ್ಷದ ಮಗುವಿನ ಪಾಲಿಗೆ ಅಪದ್ಬಾಂದವನಾದ ನಟ ಸೋನು ಸೂದ್