ಯುವರತ್ನ ಸಿನಿಮಾ ನೋಡಿ ಆ ಮಾತು ಹೇಳಿದ್ದೇಕೆ ರಕ್ಷಿತ್..!

1 min read

ಯುವರತ್ನ ಸಿನಿಮಾ ನೋಡಿ ಆ ಮಾತು ಹೇಳಿದ್ದೇಕೆ ರಕ್ಷಿತ್..!

ಏಪ್ರಿಲ್ 1 ರಂದು ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣ್ತಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನಗೆ ಎಲ್ಲೆಡೆಯಿಂದ ಒಳ್ಳೆ ರೆಸ್ಪಾನ್ಸ್ ಸಿಗ್ತಿದೆ. ಭಾರೀ ಪ್ರಶಂಸೆ ವ್ಯಕ್ತವಾಗ್ತಿದೆ. ಜೊತೆಗೆ ಸಿನಿಮಾ ತಾರೆಯರು ಅಪ್ಪು ಸಿನಿಮಾಗೆ ಬಹುಪರಾಕ್ ಅಂತಿದ್ಧಾರೆ.

ಕೊರೊನಾ ಹಾವಳಿ ನಡುವೆ ರಿಲೀಸ್ ಆಗಿ ಥಿಯೇಟರ್ ಗಳಲ್ಲಿ ಅರ್ಧ ಸಾಮರ್ಥ್ಯಕ್ಕೆ  ಪ್ರೇಕ್ಷಕರ ಸಂಖ್ಯೆ ಕುಂದುವ ಗೊಂದಲ, ಪೈರೆಸಿ ಅಲೆಯಲ್ಲಿ ಸಿಲುಕಿ ಸಾಕಷ್ಟು  ಸಂಕಷ್ಟಗಳ ನಡುವೆಯೂ ಯುವರತ್ನ ಜಯಿಸಿದ್ದಾನೆ. ಒಂದೊಳ್ಳೆ ಕಥೆ ಇದ್ದು, ಯುವಕರು ನೋಡ್ಲೇ ಬೇಕಾದ ಸಿನಿಮಾ ಇದು.

ಸಿನಿಮಾ ನೋಡಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೌದು ರಕ್ಷಿತ್ ಶೆಟ್ಟಿ ‘ಯುವರತ್ನ’ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ನೋಡುವ ಮುನ್ನಾ ಒಂದು ಟ್ವೀಟ್ ಮಾಡಿದ್ದರು, ಸಿನಿಮಾ ಮುಗಿದ ಮೇಲೆ ಮತ್ತೆ ಟ್ವೀಟ್ ಮಾಡಿದ್ದಾರೆ.

‘ಅಪ್ಪು ಅವರದ್ದು ಒನ್‌ಮ್ಯಾನ್ ಶೋ, ಅಪ್ಪು ಡ್ಯಾನ್ಸ್ ಅದ್ಭುತ’ ಎಂದು  ಟ್ವೀಟ್ ಮಾಡಿ ಸಿನಿಮಾವನ್ನು ಕೊಂಡಾಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಅಭಿನಯವನ್ನ ಬಹಳವಾಗಿ ಮೆಚ್ಚಿಕೊಂಡಿದ್ದಾರೆ. ಟ್ವೀಟ್ ಅನ್ನು ಪುನೀತ್ ರಾಜ್‌ಕುಮಾರ್, ಸಂತೋಶ್ ಆನಂದ್ ರಾಮ್, ಹೊಂಬಾಳೆ ಫಿಲಮ್ಸ್, ವಿಜಯ್ ಕಿರಗಂದೂರ್, ಕಾರ್ತಿಕ್ ಗೌಡಗೆ ಟ್ಯಾಗ್ ಮಾಡಿದ್ದಾರೆ.

ಒಂದು ವರ್ಷದ ಮಗುವಿನ ಪಾಲಿಗೆ ಅಪದ್ಬಾಂದವನಾದ ನಟ ಸೋನು ಸೂದ್

ರಶ್ಮಿಕಾ ಬರ್ತ್‍ಡೇಗೆ ಸ್ಪೆಷಲ್ ಗಿಫ್ಟ್ ಕೊಟ್ಟ ರಕ್ಷಿತ್ ಶೆಟ್ಟಿ

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd