ರಶ್ಮಿಕಾ ಬರ್ತ್‍ಡೇಗೆ ಸ್ಪೆಷಲ್ ಗಿಫ್ಟ್ ಕೊಟ್ಟ ರಕ್ಷಿತ್ ಶೆಟ್ಟಿ
ಬೆಂಗಳೂರು : ಸೌತ್ ಸಿನಿಮಾದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡುತ್ತಾ ಬಿಗ್ ಹೀರೋಗಳ ಜೊತೆ ಡ್ಯೂಯೆಟ್ ಹಾಡುತ್ತಿರುವ ರಶ್ಮಿಕಾ ಮಂದಣ್ಣಗೆ ಇಂದು ಬರ್ತ್ ಡೇ ಸಂಭ್ರಮ. ಈ ಹಿನ್ನೆಲೆ ಸಿನಿಮಂದಿ, ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡುತ್ತಿದ್ದಾರೆ.
ಈ ಮಧ್ಯೆ ರಶ್ಮಿಕಾ ಮಂದಣ್ಣ ಅವರಿಗೆ ನಟ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ವಿಶ್ ಮಾಡಿ ಹಳೆ ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
Sharing this beautiful memory of yours from the @KirikParty audition. You have travelled so far since then, chasing you'r dreams like a real worrier. Proud of you girl and Happy Birthday to you. May you see more success 😀🤗 @iamRashmika pic.twitter.com/6M1rBCQnee
— Rakshit Shetty (@rakshitshetty) April 5, 2021
ಟ್ವಿಟ್ಟರ್ ನಲ್ಲಿ ರಕ್ಷಿತ್ ಶೆಟ್ಟಿ, ನಾನು ನಿಮ್ಮ ಸುಂದರವಾದ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದೇನೆ. ಅಂದು ಆಡಿಷನ್ ಮಾಡಿರುವ ದಿನದಿಂದ ಇಲ್ಲಿಯವರೆಗೂ ನಿಮ್ಮ ಸಿನಿಮಾ ಜರ್ನಿ ತುಂಬಾ ದೂರದವರೆಗೂ ಸಾಗಿದೆ. ನಿಮ್ಮ ಕನಸಗಳನ್ನು ಬೆನ್ನಟ್ಟಿ ನೀವು ಸಾಗುತ್ತಿದ್ದೀರಾ. ಈ ಕುರಿತಾಗಿ ನನಗೆ ಹೆಮ್ಮೆ ಇದೆ. ನಾನು ನಿಮ್ಮ ಇನ್ನಷ್ಟು ಯಶಸ್ಸನ್ನು ನೋಡಲು ಬಯಸುತ್ತೇನೆ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡಿಕೊಂಡಿದ್ದಾರೆ.
ಇನ್ನು ಈ ಟ್ವೀಟ್ ಗೆ ರಕ್ಷಿತ್ ಅಭಿಮಾನಿಗಳು ನಾನಾ ರೀತಿಯಾಗಿ ಕಮೆಂಟ್ ಗಳನ್ನ ಮಾಡುತ್ತಿದ್ದಾರೆ.