ಶಿವಣ್ಣನ 124ನೇ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ನಟಿಯಾಗಿ ಎಂಟ್ರಿ ಕೊಡ್ತಿರುವ ಮಂಗ್ಲಿ…!
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಕಣ್ಣಾ ಹೊಡೆಯಾಕ ಹಾಡು ಹಿಟ್ ಆಯ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ಇದೇ ಹಾಡಿನ ತೆಲುಗು ವರ್ಷನ್ ಮಾತ್ರ ಸೂಪರ್ ಡೂಪರ್ ಹಿಟ್ ಆಗಿದೆ. ಕಾರಣ ಈ ಹಾಡಿನ ಧ್ವನಿಯಲ್ಲಿನ ಆ ಮ್ಯಾಜಿಕ್.. ಗ್ರಾಮೀಣ ಬಂಜಾರಾ ಸಮುದಾಯದ ಸ್ಲಾಂಗ್ ನಲ್ಲಿ ವಿಣಿನ್ನ ಕಂಠದಿಂದ ಮಂಗ್ಲಿ ರಾತ್ರೋ ರಾತ್ರಿ ಫೇಮಸ್ ಆಗಿದ್ದಾರೆ. ಕನ್ನಡದಲ್ಲಿಯೂ ಅಭಿಮಾನಿಗಳ ಹೃದಯ ಕದ್ದಿದ್ದಾರೆ.
ಇದೀಗ ಮಂಗ್ಲಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡ್ತಿದ್ದಾರೆ. ಗಾಯಕಿಯಾಗಿ ಅಲ್ಲ.. ನಟಿಯಾಗಿ.. ಹೌದು ನಟಿ ಮಂಗ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನಟನೆಯ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ನಟಿಯಾಗಿಯೂ ಮಿಂಚು ಹರಿಸಲಿದ್ದಾರೆ. ಶಿವಣ್ಣನ 124 ನೇ ಚಿತ್ರದಲ್ಲಿ ಮಂಗ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.








