ಶಿವರಾಜ್ ಕುಮಾರ್ ನಟನೆಯ 123ನೇ ಸಿನಿಮಾದ ಫಸ್ಟ್ ಲುಕ್ ರಿಲೀಸ್..!
ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಅಭಿನಯದ 123ನೇ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಜುಲೈ 12ಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಒಂದು ದಿನ ಮುಂಚಿತವಾಗಿ ಹೊಸ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನಾವರಣವಾಗಿದೆ.
ಖಡಕ್ ಲುಕ್ ನಲ್ಲಿ ಶಿವರಾಜ್ ಕುಮಾರ್ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಇದೊಂದು ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಅನ್ನೋದು ಗೊತ್ತಾಗ್ತಿದೆ. ಈ ಸಿನಿಮಾದಲ್ಲಿ ಡಾಲಿ ಧನಂಜಯ್ ಸಹ ಪ್ರಮಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪೋಸ್ಟರ್ ನಲ್ಲೂ ಧನಂಜಯ್ ದರ್ಶನ ನೀಡಿದ್ದಾರೆ.
ಈ ಸಿನಿಮಾದ ಟೈಟಲ್ ಶಿವಣ್ಣನ ಬರ್ತ್ ಡೇ ದಿನ ಅಂದ್ರೆ ಜುಲೈ12ಕ್ಕೆ ರಿವೀಲ್ ಆಗಲಿದೆ. ಈ ಸಿನಿಮಾಗೆ ವಿಜಯ್ ಮಿಲ್ಟನ್ ಆಕ್ಷನ್ ಕಟ್ ಹೇಳ್ತಾಯಿದ್ದಾರೆ. ಸಿನಿಮಾಗೆ ಕೃಷ್ಣ ಸಮರ್ಥ್ ಬಂಡವಾಳ ಹೂಡಿದ್ದಾರೆ.
ಇದರ ಹೊರತಾಗಿ ಶಿವಣ್ಣ ಭಜರಂಗಿ 2 ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.. ಕೊರೊನಾ ಹಾವಳಿ ಮುಗಿದು ಚಿತ್ರಮಂದಿರಗಳು ಎಂದಿನಂತೆ ಸಹಜ ಸ್ಥಿತಿಗೆ ಮರಳಿದ್ರೆ ಸಿನಿಮಾ ರಿಲೀಸ್ ಆಗುವ ಹೊಸ ದಿನಾಂಕ ಘೋಷಣೆಯಾಗಲಿದೆ.. ಇದರ ಹೊರತಾಗಿ ಶಿವಣ್ಣ ಅವರು ವೇದ ಎಂಬ ಹೊಸ ಸಿನಿಮಾದಲ್ಲಿಯೂ ನಟಿಸಲಿದ್ದಾರೆ.