ಉತ್ತರಪ್ರದೇಶ: ಎರಡಕ್ಕಿಂತ ಹೆಚ್ಚು ಮಕ್ಕಳಿದ್ರೆ ಸರ್ಕಾರಿ ಕೆಲಸ ಸಿಗಲ್ಲ..! ಜನಸಂಖ್ಯಾ ನಿಯಂತ್ರಣ ಕಾಯ್ದೆಯಲ್ಲಿನ ನಿಬಂಧನೆಗಳೇನು..?
ಉತ್ತರ ಪ್ರದೇಶ : ಇಡೀ ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮೊದಲನೇ ದೇಶ ಚೈನಾ ಆದ್ರೆ 2ನೇ ದೇಶ ಭಾರತ… ಹೀಗಾಗಿ ಸರ್ಕಾರ ಜನಸಂಖ್ಯೆ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನ ಕೈಗೊಳ್ತಿದೆ.. ಇದೀಗ ತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಜನಸಂಖ್ಯಾ ನಿಯಂತ್ರಣ ಕಾಯಿದೆ ಜಾರಿಗೆ ತರಲು ಉದ್ದೇಶಿಸಿದೆ..
ಸದ್ದಿಲ್ಲದೆ ಹೆಚ್ಚಾಗ್ತಿದೆ ಕರಿಮಾರಿಯ ಅಬ್ಬರ : ಜಿಲ್ಲಾವಾರು ಕೇಸ್ ಗಳ ಲೀಸ್ಟ್ ಇಲ್ಲಿದೆ
ಈ ಜನಸಂಖ್ಯಾ ನಿಯಂತ್ರಣ ಕಾಯಿದೆಯ ಕರಡು ಮಸೂದೆಯಲ್ಲಿನ ಕೆಲವು ನಿಬಂಧನೆಗಳ ಕುರಿತು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ. ಎರಡು ಮಕ್ಕಳ ನೀತಿಯನ್ನು ಉಲ್ಲಂಘಿಸುವವರನ್ನು ಸರಕಾರಿ ಯೋಜನೆಗಳ ಸವಲತ್ತುಗಳಿಗೆ ಅನರ್ಹರನ್ನಾಗಿಸುವ ಜತೆಗೆ ಪ್ರತಿ ರೇಷನ್ ಕಾರ್ಡ್‍ನಲ್ಲಿ ಒಂದು ಕುಟುಂಬದ ನಾಲ್ಕು ಜನರ ಹೆಸರುಗಳಿಗೆ ಸೀಮಿತಗೊಳಿಸುವ ಪ್ರಸ್ತಾಪವಿದೆ. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರನ್ನು ಸ್ಥಳೀಯಾಡಳಿತ ಚುನಾವಣೆ ಸ್ಪರ್ಧಿಸುವುದಕ್ಕೆ ನಿಷೇಧಿಸುವ ಹೊರತಾಗಿ ಅವರಿಗೆ ಸರಕಾರಿ ಉದ್ಯೋಗಿಗಳಿಗೆ ಅರ್ಜಿ ಸಲ್ಲಿಸಲು ಕೂಡ ಅನುಮತಿಸಲಾಗುವುದಿಲ್ಲ.
ಇನ್ನೊಂದೆಡೆ ಎರಡು ಮಕ್ಕಳ ನೀತಿಯನ್ನು ಪಾಲಿಸುವವರಿಗೆ ಅವರ ಸೇವಾವಧಿಯಲ್ಲಿ ಎರಡು ಹೆಚ್ಚುವರಿ ವೇತನ ಹೆಚ್ಚಳ, ಸೈಟ್ ಅಥವಾ ಮನೆ ಖರೀದಿಗೆ ಸಬ್ಸಿಡಿ ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆಯಡಿಯಲ್ಲಿ ಇಪಿಎಫ್‍ನಲ್ಲಿ ಶೇ3 ಹೆಚ್ಚಳವನ್ನು ನೀಡುವ ಪ್ರಸ್ತಾಪವಿದೆ. ಇದರ ಹೊರತಾಗಿ ಒಂದು ಮಗುವನ್ನು ಮಾತ್ರ ಹೊಂದುವವರಿಗೆ ಹಲವಾರು ಇತರ ಪ್ರೋತ್ಸಾಹಕಗಳೂ ದೊರೆಯಲಿವೆ.
ಅಯೋಧ್ಯೆಯ ಸರಯೂ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 6 ಮಂದಿ ಸಾವು
ಕರಡು ಮಸೂದೆಯನ್ನು ರಾಜ್ಯ ಕಾನೂನು ಆಯೋಗದ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಲಾಗಿದ್ದು ಸಾರ್ವಜನಿಕರ ಸಲಹೆಗಳನ್ನು ಕೇಳಲಾಗಿದೆ. ಸಲಹೆಗಳನ್ನು ಜುಲೈ 19ರೊಳಗಾಗಿ ನೀಡಬೇಕಿದೆ. ಎರಡು ಮಕ್ಕಳ ನೀತಿಯ ವ್ಯಾಪ್ತಿಯಲ್ಲಿ ಬರುವವರಿಗೆ ಮಾತ್ರ ಈ ಪ್ರಸ್ತಾವಿತ ಕಾಯಿದೆಯ ಪ್ರಯೋಜನಗಳು ದೊರೆಯಲಿವೆ ಎಂದು ಕರಡು ನೀತಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.