ಅಯೋಧ್ಯೆಯ ಸರಯೂ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 6 ಮಂದಿ ಸಾವು

1 min read

ಅಯೋಧ್ಯೆಯ ಸರಯೂ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 6 ಮಂದಿ ಸಾವು

ಉತ್ತರಪ್ರದೇಶ /ಅಯೋಧ್ಯೆ:  ಸರಯೂ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 6 ಮಂದಿ ಮೃತಪಟ್ಟಿರುವ ದಾರುಣ ಘಟನೆ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ..  4 ವರ್ಷದ ಬಾಲಕಿ ಸೇರಿದಂತೆ, ಒಂದೇ ಕುಟುಂಬದ 6 ಸದಸ್ಯರು ಅಯೋಧ್ಯೆಯ ಗುಪ್ತಾರ್ ಘಾಟ್‌ ನಲ್ಲಿ ಸರಯೂ ನದಿಯಲ್ಲಿ ಸ್ನಾನ ಮಾಡುವಾಗ ಮುಳುಗಿ ಸಾವನ್ನಪ್ಪಿದ್ದಾರೆ. ಆಗ್ರಾ ಮೂಲದ ಕುಟುಂಬದ ಮೂವರು ಇನ್ನೂ ಕಾಣೆಯಾಗಿದ್ದರೆ, ಮೂವರನ್ನು ರಕ್ಷಿಸಲಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನದಿಯಿಂದ ಮೇಲೆತ್ತಿದ 9 ಜನರಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಇಬ್ಬರು ಹೆಣ್ಣುಮಕ್ಕಳು, 16 ವರ್ಷದ ಬಾಲಕ ಸೇರಿದಂತೆ ಒಂದೇ ಕುಟುಂಬದ ಮೂವರನ್ನು ಪತ್ತೆ ಹಚ್ಚಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ  ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಪಲಾಶ್ ಬನ್ಸಾಲ್ ತಿಳಿಸಿದ್ದಾರೆ.

ಸ್ಥಳೀಯ ಮತ್ತು ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ ಡೈವರ್‌ಗಳ ಜೊತೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ ತಂಡ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ದೇವಾಲಯಗಳು ಮತ್ತು ಇತರ ಸ್ಥಳಗಳನ್ನು ನೋಡಲು ಕುಟುಂಬದ 15 ಸದಸ್ಯರು ಅಯೋಧ್ಯೆಗೆ ಬಂದಿದ್ದಾರೆ ಎಂದು ಬನ್ಸಾಲ್ ಹೇಳಿದರು. ಇಬ್ಬರು ಮಹಿಳೆಯರು ಮತ್ತು ಒಬ್ಬ ಹುಡುಗ ಸೇರಿದಂತೆ ಕುಟುಂಬದ ಮೂವರು ಸದಸ್ಯರು ನದಿಯಿಂದ ದೂರದಲ್ಲಿದ್ದರು ಎಂಬುದು ತಿಳಿದುಬಂದಿದೆ..

ಮಧ್ಯಾಹ್ನ, ಕುಟುಂಬವು ಘಾಟ್ ತಲುಪಿತು ಮತ್ತು ಸರಯೂನಲ್ಲಿ ನ ಮಾಡಲು ನಿರ್ಧರಿಸಿತು. ಆ ಸಮಯದಲ್ಲಿ ಭಾರಿ ಮಳೆಯಾಗುತ್ತಿತ್ತು. ಒಬ್ಬ ಮಹಿಳೆ ಮತ್ತು ಅವಳ 4 ವರ್ಷದ ಮಗಳು ಮೊದಲು ಆಳವಾದ ಕಡೆಗೆ ಇಳಿದಿದ್ದಾರೆ. ಆದ್ರೆ ಅಲ್ಲಿ ಕಾಲು ಜಾರಿದ್ದಾರೆ. ಸಹಾಯಕ್ಕಾಗಿ ಕೂಗಿದಾಗ, ಅವರ ಒಂಬತ್ತು ಸಂಬಂಧಿಕರು ಅವರನ್ನು ಉಳಿಸಲು ನದಿಗೆ ಹಾರಿದರು ಆದರೆ ಹೆಚ್ಚಿನ ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡರು. ಸಹಾಯಕ್ಕಾಗಿ ಅವರ ಕೂಗು ಕೇಳಿ, ಸ್ಥಳೀಯ ಈಜುಗಾರರು ಅವರನ್ನು ರಕ್ಷಿಸಲು ಓಡಿದ್ದಾರೆ. ಮೂವರನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ಧಾರೆ.. ನಂತರ 6 ಮೃತದೇಹಗಳನ್ನ ಹೊರತೆಗೆಯಲಾಗಿದೆ.

ಪ್ರೇಯಸಿಯನ್ನ ಇಂಪ್ರೆಸ್ ಮಾಡಲು ರೋಸ್ ಬದಲು ಗನ್ ಕೊಟ್ಟು ಅರೆಸ್ಟ್ ಆದ ಯುವಕ  

ಹುಡುಗರೊಂದಿಗೆ ಚಾಟ್ ಮಾಡಿದ್ದಕ್ಕೆ ಹೆಣ್ಣು ಮಕ್ಕಳ ಜುಟ್ಟು ಹಿಡಿದು ಎಳೆದಾಡಿ ಅಮಾನವೀಯವಾಗಿ ಥಳಿಸಿದ ಕುಟುಂಬ..! – VIRAL VIDEO

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd