ಹುಡುಗರೊಂದಿಗೆ ಚಾಟ್ ಮಾಡಿದ್ದಕ್ಕೆ ಹೆಣ್ಣು ಮಕ್ಕಳ ಜುಟ್ಟು ಹಿಡಿದು ಎಳೆದಾಡಿ ಅಮಾನವೀಯವಾಗಿ ಥಳಿಸಿದ ಕುಟುಂಬ..! – VIRAL VIDEO
ಮಧ್ಯಪ್ರದೇಶ : ಯುವತಿಯರಿಬ್ಬರು ಹುಡುಗರೊಂದಿಗೆ ಚಾಟ್ ಮಾಡಿದ ಕ್ಷುಲ್ಲಕ ಕಾರಣಕ್ಕೆ ಅವರ ಸಂಬಂಧಿಕರು ಕೋಲಿನಿಂದ ಹೊಡೆದು, ಜುಟ್ಟು ಹಿಡಿದು ರಸ್ತೆಯಲ್ಲಿ ಎಳೆದಾಡಿ ಥಳಿಸಿರುವ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದಿ, ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ..
The two girls who were #beaten by their cousin brothers surrounded by their relatives and villagers pic.twitter.com/09mHwI8D3w
— Free Press Journal (@fpjindia) July 4, 2021
ಮೃಗಗಳಂತೆ ವರ್ತಿಸಿರುವ ಕುಟುಂಬಸ್ಥರ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಇನ್ನೂ ವಿಡಿಯೋ ಪೊಲೀಸರ ಗಮನಕ್ಕೂ ಬಂದಿದ್ದು, ಘಟನೆ ಸಂಬಂಧ ವಿಡಿಯೋದಲ್ಲಿರುವ ಜನರನ್ನ ಗುರುತಿಸಿರುವ ಪೊಲೀಸರು 7 ಆರೋಪಿಗಳನ್ನ ಬಂಧಿಸಿ ವಿಚಾರಣೆಗಳೊಳಪಡಿಸಿದ್ದಾರೆ.
Madhya Pradesh: Two #girls were beaten by her cousin brothers as they talked to someone on phone in Pipalwa village under Tanda police station in Dhar district on June 25, 2021. This is second incident of barbarity after a woman was thrashed in #Alirajpur district last week pic.twitter.com/RGGw5QOn9M
— Free Press Journal (@fpjindia) July 4, 2021
ಮಧ್ಯಪ್ರದೇಶದ ಧರ್ ಜಿಲ್ಲೆಯ ಪಿಪಲ್ವ ಗ್ರಾಮದಲ್ಲಿ ಇಂತದ್ದೊಂದು ಅಮಾನವೀಯ ಘಟನೆ ನಡೆದಿದೆ. ಬುಡಕಟ್ಟು ಜನಾಂಗಕ್ಕೆ ಸೇರಿರುವ ಇಬ್ಬರು ಯುವತಿಯರು ಅವರ ಸಂಬಂಧಿಕ ಯುವಕರಿಗೆ ಮೆಸೇಜ್ ಮಾಡುತ್ತಿದ್ದ ಕಾರಣಕ್ಕೆ ಅವರ ಸಂಬಂಧಿಗಳು ಮನಸೋಇಚ್ಛೆ ಥಳಿಸಿದ್ದಾರೆ. ಈ ಘಟನೆ ಸುಮಾರು ಒಂದು ತಿಂಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆಗ ತಾನೆ ಜನಿಸಿದ್ದ ಸ್ವಂತ ಮಗುವನ್ನ ಕೊಂದು ಪರಾರಿಯಾಗಿದ್ದ ತಾಯಿ ಬಂಧನ