ಆಗ ತಾನೆ ಜನಿಸಿದ್ದ ಮಗುವನ್ನ ಕೊಂದು ಪರಾರಿಯಾಗಿದ್ದ ತಾಯಿ ಬಂಧನ
ಚಿಕ್ಕಬಳ್ಳಾಪುರ : ತಾಯೊಯೊಬ್ಬಳು ಆಗ ತಾನೆ ಜನಿಸಿದ್ದ ತನ್ನ ಸ್ವಂತ ಮಗುವನ್ನ ಕೊಲೆ ಮಾಡಿರುವ ದಾರುಣ ಘಟನೆ ಚಿಂತಾಮಣಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿತ್ತು… ಜುಲೈ 3ರಂದು ಶೌಚಾಲಯದಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿತ್ತು. ತನಿಖೆ ನಡೆಸಿರುವ ಪೊಲೀಸರು ಆರೋಪಿ ಪೋಷಕರನ್ನ ಬಂಧಿಸಿದ್ದಾರೆ.
ಚೇಳೂರು ತಾಲೂಕು ಚಾಕವೇಲು ಗ್ರಾಮದ ಮಮತಾ ಹಾಗೂ ವೇಣುಗೋಪಾಲರೆಡ್ಡಿ ಬಂಧಿತ ಆರೋಪಿಗಳಾಗಿದ್ದಾರೆ. ಹೆತ್ತ ಮಗುವನ್ನ ಕೊಲೆ ಮಾಡಿರೋದಾಗಿ ತಾಯಿ ಮಮತಾ ತಪ್ಪೊಪ್ಪಿಕೊಂಡಿದ್ದಾಳೆ.
ಆಸಲಿಗೆ ಮಮತಾ ತಾನು ಗರ್ಭಿಣಿ ಆಗಿರುವ ವಿಚಾರವನ್ನೇ ಮನೆಯಲ್ಲಿ ತಿಳಿಸಿರಲಿಲ್ಲ. ಗಂಡನಿಗೂ ಸಹ ಇತ್ತೀಚೆಗೆ ತಿಳಿಸಿದ್ದಳು ಎನ್ನಲಾಗಿದೆ. ಚಿಂತಾಮಣಿಗೆ ಅಕ್ಕನ ಮನೆಗೆ ಅಂತ ಖಾಸಗಿ ಬಸ್ ನಲ್ಲಿ ಗಂಡ ಹೆಂಡತಿ ಇಬ್ಬರು ಬರುವಾಗ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಚಿಂತಾಮಣಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ಗಂಡ-ಹೆಂಡತಿ ಇಬ್ಬರು ಬಂದಿದ್ದಾರೆ.
ಈ ಸಮಯದಲ್ಲಿ ಶೌಚಾಲಯಕ್ಕೆ ಅಂತ ಹೋದ ಮಮತಾಳಿಗೆ ಅಲ್ಲೇ ಹೆರಿಗೆಯಾಗಿದೆ. ಆದರೆ ಅಲ್ಲೇ ಮಗುವನ್ನ ಕೊಲೆ ಮಾಡಿದ್ದಾಳೆ. ಹೊರಗೆ ಬಂದು ಗಂಡನಿಗೆ ವಿಷಯ ತಿಳಿಸಿ ಅಲ್ಲಿಂದ ಇಬ್ಬರು ಎಸ್ಕೇಪ್ ಆಗಿದ್ದಾರೆ. ಬಳಿಕ ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಿದ ಪೊಲೀಸರು ಮಗುವನ್ನ ಕೊಂದುಹಾಕಿದ್ದ ಪಾಪಿ ತಾಯಿ ಮಮತಾ ಹಾಗೂ ಆಕೆಗೆ ಸಹಕಾರ ನೀಡಿದ ಗಂಡ ವೇಣುಗೋಪಾಲರೆಡ್ಡಿಯನ್ನ ಬಂಧಿಸಿದ್ದಾರೆ. ಈ ದಂಪತಿಗೆ ಈಗಾಗಲೇ 6 ವರ್ಷದ ಗಂಡು ಮಗನಿದ್ದಾನೆ.