ಡೋಲಾಯಮಾನ ಸ್ಥಿತಿಯಲ್ಲಿ ‘ಮಹಾ’ ಸರ್ಕಾರ..!! ವಿಸರ್ಜನೆ ಸುಳಿವು ಕೊಟ್ಟ ಸಂಜಯ್ ರಾವತ್
1 min read
ಮುಂಬೈ : ಮಹಾರಾಷ್ಟ್ರ ಸರ್ಕಾರ ಸದ್ಯ ಡೋಲಾಯಮಾನ ಸ್ಥಿತಿಯಲ್ಲಿದೆ… ಸರ್ಜಾರ ಪತನವಾಗಲಿರುವ ಲಕ್ಷಣಗಳು ಕಂಡುಬರುತ್ತಿವೆ,. ಈಗಾಗಲೇ ಏಕನಾಥ್ ಶಿಂದೆ ಅವರೊಂದಿಗೆ ಸುಮಾರು 40 ಸಚಿವರು ಬಂಡಾಯ ಎದ್ದಿರುವುದು ಗೊತ್ತೇ ಇದೆ..
ಈ ನಡುವೆ ಶಿವಸೇನಾ ನಾಯಕ , ಸಂಸದ ಸಂಜಯ್ ರಾವತ್ ಅವರು ಸ್ಪೋಟಕ ಟ್ವೀಟ್ ಮಾಡಿ ಹೊಸ ಸಂಚಲನವನ್ನ ಸೃಷ್ಟಿ ಮಾಡಿದ್ದಾರೆ..
ವಿಧಾನಸಭೆಯ ವಿಸರ್ಜನೆಯತ್ತ ಮಹಾರಾಷ್ಟ್ರ ರಾಜಕೀಯ ಬೆಳವಣೆಗೆಗಳ ಪಯಣ ಎಂದು ಬರೆದುಕೊಂಡಿದ್ಧಾರೆ..
‘ಮಹಾ ವಿಕಾಸ್ ಅಘಾಡಿ’ ಮೈತ್ರಿ ಸರ್ಕಾರ ಪತನವಾಗುವ ಬೆಳವಣಿಗೆಗಳ ಬೆನ್ನಲ್ಲೇ ಸಂಜಯ್ ರಾವತ್ ಇಂತಹದೊಂದು ಟ್ವೀಟ್ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.