ಕೇಂದ್ರದ ನಾಯಕರಿಗೆ ರಾಹುಲ್ ಗಾಂಧಿ ಭಯ ಕಾಡ್ತಿದೆ: ಶಿವಸೇನಾ
ಮುಂಬೈ: ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಭಯ ಕಾಡ್ತಿದೆ ಎಂದು ಶಿವಸೇನೆ ಹೇಳಿದೆ. ಹೌದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯನ್ನ ಶ್ಲಾಘಿಸಿರುವ ಶಿವಸೇನಾ, ಕೇಂದ್ರದಲ್ಲಿ ಅಧಿಕಾರದಲ್ಲಿರುವವರಿಗೆ ರಾಹುಲ್ ಕಾಂಗ್ರೆಸ್ ಅಧ್ಯಕ್ಷಗಾದಿಗೆ ಹಿಂತಿರುಗುವ ಭಯ ಕಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಗಾಂಧಿ ಕುಟುಂಬವನ್ನು ಅವಮಾನಿಸುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ ಎಂದು ಆರೋಪಿಸಿ ಕಿಡಿಕಾರಿದೆ.
ಈ ಕುರಿತು ಶಿವಸೇನಾ ತನ್ನ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಉಲ್ಲೇಖ ಮಾಡಿದೆ. ರಾಹುಲ್ ಗಾಂಧಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷಗಾದಿಗೆ ಹಿಂತಿರುಗುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ. ಬಿಜೆಪಿಗೆ ಪ್ರಧಾನಿ ನರೇಂದ್ರ ಮೋದಿಯಂತೆ ಕಾಂಗ್ರೆಸ್ ಗೆ ರಾಹುಲ್ ಗಾಂಧಿಯಿಲ್ಲದೆ ಪರ್ಯಾಯ ಮಾರ್ಗವಿಲ್ಲ ಎಂದು ಹೇಳಿದೆ.
ಕೆಜಿಎಫ್ – 2 ಟೀಸರ್… ರಾಕಿಂಗಃ.. ರಾಕಿಂಗಸ್ಯ.. ರಾಕಿಂಗೋಭ್ಯಃ
ಈ ಸತ್ಯವನ್ನು ಒಪ್ಪಿಕೊಳ್ಳಲೇಬೇಕು. ಸ್ವಲ್ಪ ಸಮಯದ ವರೆಗೆ ರಾಹುಲ್ ಗಾಂಧಿ ಹೋದ ನಂತರ, ಪಕ್ಷದ ಹಿಡಿತವು ದುರ್ಬಲಗೊಂಡಿದೆ. ಈಗ ರಾಹುಲ್ ಗಾಂಧಿ ಮತ್ತೆ ಅಧಿಕಾರಕ್ಕೆ ಮರಳುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಹುದ್ದೆಯನ್ನು ವಹಿಸಲು ರಾಹುಲ್ ಗಾಂಧಿ ತಯಾರಾಗಿದ್ದಾರೆ ಎಂದು ಉಲ್ಲೇಖಿಸಿದೆ. ಅಷ್ಟೇ ಅಲ್ಲ ರಾಹುಲ್ ಗಾಂಧಿ ದುರ್ಬಲ ನಾಯಕ ಎಂದು ಬಿಂಬಿಸುವ ಪ್ರಯತ್ನಗಳು ನಡೆಸಲಾಗುತ್ತಿದೆ ಎಂದು ಸಹ ಆರೋಪಿಸಲಾಗಿದೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel