Shivjarkumar – Nartan : ‘ಮಫ್ತಿ’ ನರ್ತನ್ ಜೊತೆಗೆ ಶಿವಣ್ಣ – ‘ಭೈರತಿ ರಣಗಲ್’
ಮಫ್ತಿ ಸಿನಿಮಾದ ಮೂಲಕ ಮೋಡಿ ಮಾಡಿರುವ ನರ್ತನ್ ಮುಂದೆ ಯಶ್ ಅವರ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎಂದೇ ಹೇಳಲಾಗ್ತಿತ್ತು..
ಆದ್ರೀಗ ನರ್ತನ್ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಅವರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ…
ತಮ್ಮದೇ ಬ್ಯಾನರ್ ಸಿನಿಮಾದಲ್ಲಿ ನರ್ತನ್ ಗೆ ಶಿವರಾಜ್ ಕುಮಾರ್ ಅವಕಾಶ ನೀಡಿದ್ದಾರೆ..
ಈ ಸಿನಿಮಾಗೆ ‘ಭೈರತಿ ರಣಗಲ್’ ಎಂದು ಹೆಸರಿಟ್ಟಿದ್ದಾರೆ. ಗಮನಿಸಬೇಕಾದ ವಿಚಾರ ಅಂದ್ರೆ ಈ ಟೈಟಲ್ , ‘ಮಫ್ತಿ’ಯಲ್ಲಿ ಶಿವರಾಜ್ ಕುಮಾರ್ ಮಾಡಿದ್ದ ಪಾತ್ರದ ಹೆಸರಾಗಿದೆ.
ಈ ಸಿನಿಮಾ ಕುರಿತು ಗೀತಾ ಪಕ್ಚರ್ಸ್ ಹಲವು ಮಾಹಿತಿಗಳನ್ನು ಹಂಚಿಕೊಂಡಿದೆ.
ಶಿವರಾಜ್ ಕುಮಾರ್ ಮತ್ತು ನರ್ತನ್ ಕಾಂಬಿನೇಷನ್ ನಲ್ಲಿ ‘ಭೈರತಿ ರಣಗಲ್ ‘ ಸಿನಿಮಾ ಮೂಡಿ ಬರಲಿದ್ದು, ಗೀತಾ ಶಿವರಾಜ್ ಕುಮಾರ್ ಈ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ..
ಗೀತಾ ಪಿಕ್ಚರ್ಸ್ ಬ್ಯಾನರ್ ನಲ್ಲಿ ಮೂಡಿ ಬರಲಿರುವ ಎರಡನೇ ಸಿನಿಮಾ ಇದಾಗಿದೆ.






