ಶಿವರಾಜ್ ಕುಮಾರ್ ಸಿನಿಮಾ ಹೆಸರು – ಅಸಲಿ ಹೆಸರಿನ ಕಹಾನಿ ಬಿಚ್ಚಿಟ್ಟ ಶಿವಣ್ಣ..
ಕರುನಾಡ ಚಕ್ರವರ್ತಿ, ಸೆಂಚ್ಯುರಿ ಸ್ಟಾರ್, ಅಭಿಮಾನಿಗಳ ಪ್ರೀತಿಯ ಶಿವಣ್ಣ ಅವರಿಗೆ ನಿಜವಾದ ಹೆಸರು ಬೇರೆ ಇದೆ ಎಂಬುದು ನಿಮಗೆ ಗೊತ್ತೆ ? ಸಿನಿಮಾ ರಂಗದಲ್ಲಿ ಶಿವರಾಜ್ ಕುಮಾರ್ ಎಂದೇ ಫೇಮಸ್ ಆಗಿರುವ ಶಿವಣ್ಣ ತನಗೆ ಇನ್ನೊಂದು ಒರಿಜಿನಲ್ ಹೆಸರಿದೆ ಎನ್ನುವುದನ್ನ ತಾವಾಗಿಯೇ ಬಹಿರಂಗ ಪಡಿಸಿದ್ದಾರೆ.
ಮೈಸೂರಿನ ಆಂದೋಲನ ಪತ್ರಿಕೆ 50 ವರ್ಷ ಪೂರೈಸಿದ ಹಿನ್ನೆಲೆ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನ ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಣ್ಣ ನನ್ನ ಒರಿಜಿನಲ್ ಹೆಸರು ನಾಗರಾಜ ಶಿವಪುಟ್ಟಸ್ವಾಮಿ ಎಂಬುದುನ್ನ ಬಹಿರಂಗಪಡಿಸಿದ್ದಾರೆ.
ಪಾಸ್ ಪೋರ್ಟ್, ಬ್ಯಾಂಕ್ ಅಕೌಂಟ್, ಸರಕಾರಿ ದಾಖಲಾತಿಗಳಲ್ಲಿ ನನ್ನ ಹೆಸರು ನಾಗರಾಜ ಶಿವಪುಟ್ಟಸ್ವಾಮಿ ಎಂದು ಇದೆ. ನಾನು ಸೈನ್ ಮಾಡುವಾಗ ಶಿವರಾಜ್ ಕುಮಾರ್ ಎಂದು ಮಾಡುವುದಿಲ್ಲ. ಸಿನಿಮಾ ರಂಗದಲ್ಲಿ ಮಾತ್ರ ಶಿವರಾಜ್ ಕುಮಾರ್ ಎಂದಿದೆ ಎನ್ನುವುದನ್ನ ಸ್ವತಃ ಶಿವಣ್ಣ ಮೈಸೂರಿನಲ್ಲಿ ಬಹಿರಂಗಪಡಿಸಿದ್ದಾರೆ.