ಡಿಕೆಶಿಗೆ ಜನ ಬೆಂಬಲವಿಲ್ಲ, ಕಾರ್ಯಕರ್ತರ ಬೆಂಬಲವೂ ಇಲ್ಲ : ಶೋಭಾ ಕರಂದ್ಲಾಜೆ
ಮಂಗಳೂರು : ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ವಿಚಲಿತರಾಗಿದ್ದಾರೆ, ಆತಂಕ ಗೊಂಡಿದ್ದಾರೆ. ಹೀಗಾಗಿಯೇ ಅವರು ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಂಡಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಂದ ಕಾಂಗ್ರೆಸ್ ವಿಚಲಿತಗೊಂಡಿದೆ. ಡಿ.ಕೆ ಶಿವಕುಮಾರ್ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್ ಎಲ್ಲಾ ಚುನಾವಣೆಯಲ್ಲಿ ಸೋಲು ಕಂಡಿದೆ.
ಇದರಿಂದ ವಿಚಲಿತರಾಗಿರುವ ಡಿ.ಕೆ.ಶಿ ರಾಜ್ಯ ಸರಕಾರದ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸ್ಮಾರ್ಟ್ ವರ್ಕ್‍ಗೂ… ಹಾರ್ಡ್ ವರ್ಕ್‍ಗೂ ಇರೋ ವ್ಯತ್ಯಾಸ ಏನು..?
ಇನ್ನು ಡಿ.ಕೆ.ಶಿವಕುಮಾರ್ ಅವರಿಗೆ ಜನ ಬೆಂಬಲವಿಲ್ಲ,ಕಾರ್ಯಕರ್ತರ ಬೆಂಬಲವೂ ಇಲ್ಲ. ಬಿಜೆಪಿಯ ಸಂಘಟನಾತ್ಮಕ ಕಾರ್ಯತಂತ್ರಗಳನ್ನೇ ಡಿಕೆಶಿ ಫಾಲೋ ಮಾಡ್ತಿದ್ದಾರೆ.

ಸಿದ್ದರಾಮಯ್ಯ ಅವರೇ ಡಿಕೆಶಿಯವರ ಕಾರ್ಯಶೈಲಿ ಒಪ್ಪುತ್ತಿಲ್ಲ. ಇದನ್ನು ಮುಚ್ಚಿಕೊಳ್ಳಲು ಬಿಜೆಪಿ ಸರ್ಕಾರ, ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ.
ಜನರು ಜಾಗ್ರತರಾಗಿದ್ದಾರೆ,ಅವರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಇದೇ ವೇಳೆ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಿ, ಸಿದ್ದರಾಮಯ್ಯ ವಿಚಾರವಾದಿ ನಾಯಕ ಇರಬಹುದು. ಆದ್ರೆ ಅವರು ಕೊಡವರ ಮತ್ತು ಹಿಂದುಗಳ ಭಾವನೆಗೆ ಧಕ್ಕೆ ಮಾಡ್ತಿದ್ದಾರೆ.
ಕೊಡವರು ಗೋಮಾಂಸ ತಿಂತಾರೆ ಅಂತ ಅವರು ಹೇಳ್ತಾರೆ. ಒಂದು ಜನಾಂಗದ ಓಲೈಕೆಗೆ ಸಿದ್ದರಾಮಯ್ಯ ಭಾವನೆಗೆ ಧಕ್ಕೆ ತರ್ತಿದ್ದಾರೆ ಎಂದು ಟೀಕಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








