ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ (WHO) ರಾಜ್ಯದ ಅಡಿಕೆ ಬೆಳೆಗಾರರಿಗೆ ಬಿಗ್ ಶಾಕ್ ನೀಡಿದ್ದು, ಈ ಪ್ರಮುಖ ವಾಣಿಜ್ಯ ಬೆಳೆಯ ಭವಿಷ್ಯ ಮತ್ತೆ ಆತಂಕ ಮೂಡಿಸಿದೆ. WHOನ ಅಂಗ ಸಂಸ್ಥೆಯೊಂದು ತನ್ನ ಇತ್ತೀಚಿನ ವರದಿಯಲ್ಲಿ ಅಡಿಕೆಯನ್ನು ಕ್ಯಾನ್ಸರ್ಕಾರಕ (ಕ್ಯಾನ್ಸರ್ ಹುಟ್ಟಿಸುವ ಸಾಮರ್ಥ್ಯ ಹೊಂದಿರುವುದು) ಎಂದು ಪರಿಗಣಿಸಿ, ಅದರ ಬಳಕೆಯನ್ನು ನಿಯಂತ್ರಿಸಲು ಶಿಫಾರಸು ಮಾಡಿದೆ.
ಈ ವರದಿ ಪ್ರಕಾರ, ಅಡಿಕೆ ಬಳಕೆ ಕಡಿಮೆ ಮಾಡಿದರೆ ವಿಶ್ವದಲ್ಲಿ ಬಾಯಿ ಕ್ಯಾನ್ಸರ್ನ ಪ್ರಮಾಣವನ್ನು ಗಮನಾರ್ಹವಾಗಿ ತಗ್ಗಿಸಬಹುದಾಗಿದೆ ಎಂದು ತಿಳಿಸಲಾಗಿದೆ. ಇದರ ಪರಿಣಾಮವಾಗಿ, ಅಡಿಕೆ ಬಳಕೆಗೆ ಸರ್ಕಾರ ನಿಯಂತ್ರಣ ಹೇರಲು ಪ್ರಯತ್ನಿಸಬಹುದು ಎಂಬ ಆತಂಕ ಅಡಿಕೆ ಬೆಳೆಗಾರರಲ್ಲಿ ಮನೆ ಮಾಡಿದೆ. ಅಡಿಕೆ ಪ್ರಮುಖ ವಾಣಿಜ್ಯ ಬೆಳೆ ಆಗಿರುವುದರಿಂದ, ಈ ವರದಿಯ ಪರಿಣಾಮವಾಗಿ ಬೆಳೆಗಾರರ ಆದಾಯ ಹಾಗೂ ಜೀವನಮಟ್ಟಕ್ಕೂ ಬೃಹತ್ ಹೊಡೆತ ಬೀಳಬಹುದಾಗಿದೆ.
ಇದೇ ಕಾರಣಕ್ಕೆ ಅಡಿಕೆ ಬೆಳೆಗಾರರು ಈ ತೀರ್ಮಾನವನ್ನು ಪ್ರಶ್ನಿಸುತ್ತಿದ್ದಾರೆ ಮತ್ತು ಈ ವರದಿಯ ವಿರುದ್ಧ ಹೋರಾಟ ಮಾಡಲು ಸಜ್ಜಾಗಿದ್ದಾರೆ.








