ಐಪಿಎಲ್ ಆರಂಭಕ್ಕೂ ಮುನ್ನ ಕೆಕೆಆರ್ ಗೆ ಆಘಾತ KKR
ಕೋಲ್ಕತ : ಕೊರೊನಾ ಕಾರಣದಿಂದಾಗಿ ಮುಂದೂಡಿಕೆಯಾಗಿದ್ದ ಈ ಬಾರಿಯ ಐಪಿಎಲ್ ನ ಉಳಿದ ಪಂದ್ಯಗಳನ್ನು ಯುಎಇನಲ್ಲಿ ಆಡಿಸಲು ಬಿಸಿಸಿಐ ನಿರ್ಧರಿಸಿದೆ.
ಮುಂದಿನ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಲ್ಲಿ ಐಪಿಎಲ್ ನ ಉಳಿದ 31 ಪಂದ್ಯಗಳು ನಡೆಯಲಿವೆ. ಆದರೆ, ಲೀಗ್ ಗೆ ವಿದೇಶಿ ಆಟಗಾರರು ಪೂರ್ಣಪ್ರಮಾಣದಲ್ಲಿ ಲಭ್ಯರಾಗುವುದು ಅನುಮಾನ ಮೂಡಿಸಿದೆ.
ಈ ಮಧ್ಯೆ ಈ ಟೂರ್ನಿಗೆ ಕೆಲ ವಿದೇಶಿ ಆಟಗಾರರು ಲಭ್ಯವಿಲ್ಲ ಎಂದು ಹೇಳಲಾಗಿದೆ.
ಅದೇ ರೀತಿ ಕೋಲ್ಕತ ನೈಟ್ ರೈಡರ್ಸ್ ತಂಡದ ಪ್ರಮುಖ ವೇಗಿ ಪ್ಯಾಟ್ ಕಮ್ಮಿನ್ಸ್ ಕೂಡ ಹೊರಗುಳಿಯುವುದು ಅಧಿಕೃತವಾಗಿ ಖಾತ್ರಿಯಾಗಿದೆ. ಇದರಿಂದ ಕೆಕೆಆರ್ ತಂಡಕ್ಕೆ ಹಿನ್ನಡೆಯುಂಟು ಮಾಡಿದೆ.
ಕಮ್ಮಿನ್ಸ್ ಅಲಭ್ಯತೆ ಬಗ್ಗೆ ಆಸ್ಟ್ರೆಲಿಯಾದ ಪ್ರಮುಖ ದಿನ ಪತ್ರಿಕೆ ಸಿಡ್ನಿ ಮಾನಿರ್‍ಂಗ್ ಹೆರಾಲ್ಡ್, ಪ್ಯಾಟ್ ಕಮ್ಮಿನ್ಸ್ ಅಲಭ್ಯತೆಯನ್ನು ಖಚಿತಪಡಿಸಿದೆ.
ಕಮ್ಮಿನ್ಸ್ ವೇಗದ ಬೌಲಿಂಗ್ ವಿಭಾಗದಲ್ಲಿ ಕೆಕೆಆರ್ ತಂಡದ ಪ್ರಮುಖ ಅಸ್ತ್ರವಾಗಿದ್ದರು. ಇದೀಗ ಅಲಭ್ಯತೆಯಿಂದಾಗಿ ಕಮ್ಮಿನ್ಸ್ ಕೇವಲ ಅರ್ಧ ಸಂಭಾವನೆಯಷ್ಟೆ ಪಡೆಯಲಿದ್ದಾರೆ.