PNB ಬ್ಯಾಂಕ್ ಗ್ರಾಹಕರಿಗೆ ಕಹಿ ಸುದ್ದಿ – ಎಲ್ಲಾ ಸೇವೆಗಳ ಶುಲ್ಕ ಹೆಚ್ಚಳ
ದೇಶದ ಎರಡನೇ ಸಂಖ್ಯೆಯ ಸರ್ಕಾರಿ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಗೆ ಶಾಕಿಂಗ್ ಸುದ್ದಿಯನ್ನ ನೀಡಿದೆ (PNB) ಬ್ಯಾಂಕ್ ಎಲ್ಲಾ ಸೇವೆಗಳ ಶುಲ್ಕವನ್ನು ಹೆಚ್ಚಿಸಿದೆ. ಅಲ್ಲದೆ ಈಗ ನಗರ ಪ್ರದೇಶದ ಗ್ರಾಹಕರು ತಮ್ಮ ಖಾತೆಯಲ್ಲಿ ಕನಿಷ್ಠ ಹಣ (ಮಿನಿಮಮ್ ಬ್ಯಾಲೆನ್ಸ) 10,000 ರೂ. ಇರಬೇಕು ಎಂದು ರೂಲ್ಸ್ ಮಾಡಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ಈ ಮಾಹಿತಿಯನ್ನು ನೀಡಿದೆ. ಜನವರಿ 15 ರಿಂದ ಎಲ್ಲಾ ಶುಲ್ಕಗಳು ಅನ್ವಯವಾಗುತ್ತವೆ ಎಂದು ಹೇಳಿದೆ. ಇದರ ಪ್ರಕಾರ, ನಗರ ಪ್ರದೇಶಗಳಲ್ಲಿ ತ್ರೈಮಾಸಿಕ ಆಧಾರದ ಮೇಲೆ ಸರಾಸರಿ 10,000 ರೂ. ಮಿನಿಮಮ್ ಬ್ಯಾಸಲೆನ್ಸ ವಿಧಿಸಿದೆ. ಈವರೆಗೆ 5 ಸಾವಿರ ರೂ. ಇತ್ತು. 10 ಸಾವಿರಕ್ಕಿಂತ ಕಡಿಮೆ ಇದ್ದರೆ 600 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ ಎಂದು ಬ್ಯಾಂಕ್ ಹೇಳಿದೆ. ಈ ಮೊತ್ತ ಇದುವರೆಗೆ 300 ರೂ. ಇತ್ತು.
ಗ್ರಾಮೀಣ ಪ್ರದೇಶದ ಖಾತೆಗೆ 400 ರೂ
ಕನಿಷ್ಠ ಬ್ಯಾಲೆನ್ಸ್‌ನಲ್ಲಿ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿನ ಖಾತೆಗಳಿಗೆ ಕನಿಷ್ಠ ಬ್ಯಾಲೆನ್ಸ ಮಿತಿ ಕೇವಲ ಒಂದು ಸಾವಿರ ರೂ. ಇದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.
ಆದರೆ 1 ಸಾವಿರಕ್ಕಿಂತ ಕಡಿಮೆ ಇದ್ದರೆ ದಂಡ ಶುಲ್ಕವು 400 ರೂ ಆಗಲಿದೆ ಎಂದು ಬ್ಯಾಂಕ್ ಹೇಳಿದೆ, ಇದು ಮೊದಲು 200 ರೂ. ಇತ್ತು. ಈ ಎಲ್ಲಾ ಶುಲ್ಕಗಳನ್ನು ತ್ರೈಮಾಸಿಕ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತದೆ.