ಷಿಂಗ್ಟನ್: ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ (Donald Trump) ಅಧಿಕಾರ ಸ್ವೀಕರಿಸಿದ್ದಾರೆ. ಈ ವೇಳೆ ವಿದೇಶಗಳಿಗೆ ತೆರಿಗೆ ವಿಧಿಸುವ ಮಹತ್ವದ ಘೋಷಣೆ ಮಾಡಿದ್ದಾರೆ. ಅಲ್ಲದೇ, 80 ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದಾರೆ.
2021ರಲ್ಲಿ ನಡೆದ ವಾಷಿಂಗ್ಟನ್ ಗಲಭೆ ಪ್ರಕರಣದ ಆರೋಪಿಗಳಿಗೆ ಕ್ಷಮಾದಾನ ನೀಡಿದ್ದಾರೆ. ಜೋ ಬೈಡನ್ ಅವರ ಅವಧಿಯಲ್ಲಿ ತೆಗೆದುಕೊಳ್ಳಲಾದ 80 ವಿನಾಶಕಾರಿ ಕ್ರಮಗಳನ್ನು ಹಿಂಪಡೆಯುವುದಾಗಿ ಹೇಳಿದ್ದಾರೆ.
ಅಮೆರಿಕದ ದಕ್ಷಿಣ ಗಡಿಯಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡುವುದು. ಮೆಕ್ಸಿಕೋ ಗಡಿಗೆ ಸೇನೆ ಕಳುಹಿಸುವುದು ನಮ್ಮ ಆದ್ಯತೆ ಆಗಿದೆ. ಅಮೆರಿಕ ಪ್ರವೇಶಿಸುತ್ತಿರುವ ಅಕ್ರಮ ವಲಸಿಗರನ್ನು ಸಂಪೂರ್ಣವಾಗಿ ತಡೆಯುವುದು. ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ದೇಶದಿಂದ ಹೊರಹಾಕುವುದು ಆದ್ಯತೆಯಾಗಿದೆ. ಇಂಧನ ಉತ್ಪಾದನೆ ಹೆಚ್ಚಿಸುವುದು, ಪರಿಸರ ನಿಯಮಗಳನ್ನು 2021ರ ಪ್ಯಾರಿಸ್ ಹವಾಮಾನ ಒಪ್ಪಂದವನ್ನು ಹಿಂತೆಗೆದುಕೊಳ್ಳುವ ಪ್ರಮುಖ ಆದೇಶಗಳಿಗೆ ಸಹಿ ಹಾಕಿದ್ದಾರೆ.
ಫೆಡರಲ್ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಕೊನೆಗೊಳಿಸುವ ಆದೇಶ ಪ್ರಕಟಿಸಿದ್ದಾರೆ. ಸರ್ಕಾರದ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಏಜೆನ್ಸಿ ಮುಖ್ಯಸ್ಥರು, ವಿಭಾಗಗಳು ಆದಷ್ಟು ಬೇಗ ವರ್ಕ್ ಫ್ರಮ್ ಹೋಮ್ ನಿಯಮ ಹಿಂಪಡೆಯಬೇಕು ಎಂದು ಸೂಚಿಸಿದ್ದಾರೆ. ತೃತೀಯ ಲಿಂಗಿಗಳನ್ನು ಮೊದಲಿನಿಂದಲೂ ವಿರೋಧಿಸುತ್ತಿರುವ ಟ್ರಂಪ್, ಅಮೆರಿಕದಲ್ಲಿ 2 ಲಿಂಗಗಳಷ್ಟೇ ಇರುತ್ತವೆ ಎಂದು ಘೋಷಿಸಿದ್ದಾರೆ.