ADVERTISEMENT
Monday, November 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಲಕ್ಷಾಂತರ ನುಸುಳುಕೋರರ ಕಟ್ಟುಕಥೆ ಎಲ್ಲಿಗೆ ಬಂತು? ನನ್ನ ಮತದಾನದ ಹಕ್ಕನ್ನೇ ಕಸಿದ ಸರ್ಕಾರ: ಇಬ್ಬರಿಗಾಗಿ ಒಂದು ಕೋಟಿ ಮತದಾರರನ್ನು ಕಿತ್ತೆಸೆದಿದ್ದೇಕೆ? ಪ್ರಕಾಶ್ ರಾಜ್ ಪ್ರಶ್ನೆ

Shwetha by Shwetha
November 1, 2026
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ಮಂಗಳೂರು:ರಾಜ್ಯದಲ್ಲಿ ಲಕ್ಷಾಂತರ ಬಾಂಗ್ಲಾದೇಶಿಗರು ಮತ್ತು ಪಾಕಿಸ್ತಾನಿಗಳು ಅಕ್ರಮವಾಗಿ ನೆಲೆಸಿದ್ದಾರೆ ಎಂದು ಬೊಬ್ಬೆ ಹೊಡೆಯುತ್ತಿದ್ದವರು ಈಗ ಎಲ್ಲಿದ್ದಾರೆ? ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಅಂತಿಮ ವರದಿಯಲ್ಲಿ ಪತ್ತೆಯಾಗಿದ್ದು ಕೇವಲ ಇಬ್ಬರು ಮಹಿಳೆಯರು. ಆ ಲಕ್ಷಾಂತರ ನುಸುಳುಕೋರರನ್ನು ಈಗಲಾದರೂ ಜನರಿಗೆ ತೋರಿಸಿ ಎಂದು ಹಿರಿಯ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರಿಗೆ ತೀಕ್ಷ್ಣ ಸವಾಲು ಹಾಕಿದ್ದಾರೆ.

ಶನಿವಾರ ಮಂಗಳೂರಿನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಎಸ್‌ಐಆರ್ ಪ್ರಕ್ರಿಯೆಯಲ್ಲಾಗಿರುವ ಲೋಪದೋಷಗಳ ಕುರಿತು ದತ್ತಾಂಶಗಳ ಸಮೇತ ವಾಗ್ದಾಳಿ ನಡೆಸಿದ ಅವರು, ಅಧಿಕಾರಸ್ಥರ ಸುಳ್ಳು ಭಾಷಣಗಳು ಮತ್ತು ಅದಕ್ಕೆ ಬಲಿಯಾಗುತ್ತಿರುವ ಸಾರ್ವಜನಿಕರ ಹಿತಾಸಕ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

Related posts

charchge-barada-bjp-eega-padayatre-priyank-kharge

ಸ್ಟಿಂಗ್ ಪ್ರಕರಣದಲ್ಲಿ ಬಯಲಾಯಿತು ದೆಹಲಿ ನಂಟು: ಇದು ಬರೀ ಟ್ರೇಲರ್, ಪಿಕ್ಚರ್ ಅಭಿ ಬಾಕಿ ಹೈ ಎಂದು ಗುಡುಗಿದ ಪ್ರಿಯಾಂಕ್ ಖರ್ಗೆ

November 2, 2026
ರಾಜಕೀಯದಲ್ಲಿ ಮಹಿಳೆಯರು ಕೇವಲ ಕರಿಬೇವಿನ ಸೊಪ್ಪಿನಂತಾಗಿದ್ದಾರೆ: ಸಂಸತ್ತಿನಲ್ಲಿ ಮೀಸಲಾತಿ ಚರ್ಚೆ, ಸಂಪುಟದಲ್ಲಿ ಮಾತ್ರ ಮಹಿಳೆಯರಿಗಿಲ್ಲ ಸ್ಥಾನ- ಎಲ್ಲಾ ಪಕ್ಷಗಳ ಮನಸ್ಥಿತಿ ಒಂದೇ ಎಂದ ಕೈ ಹಿರಿಯ ನಾಯಕಿ

ರಾಜಕೀಯದಲ್ಲಿ ಮಹಿಳೆಯರು ಕೇವಲ ಕರಿಬೇವಿನ ಸೊಪ್ಪಿನಂತಾಗಿದ್ದಾರೆ: ಸಂಸತ್ತಿನಲ್ಲಿ ಮೀಸಲಾತಿ ಚರ್ಚೆ, ಸಂಪುಟದಲ್ಲಿ ಮಾತ್ರ ಮಹಿಳೆಯರಿಗಿಲ್ಲ ಸ್ಥಾನ- ಎಲ್ಲಾ ಪಕ್ಷಗಳ ಮನಸ್ಥಿತಿ ಒಂದೇ ಎಂದ ಕೈ ಹಿರಿಯ ನಾಯಕಿ

November 2, 2026

ಬಾಂಗ್ಲಾ ನುಸುಳುಕೋರರ ಹೆಸರಲ್ಲಿ ಬ್ರೈನ್‌ವಾಶ್

ದಕ್ಷಿಣ ಕನ್ನಡದ ಬಿಜೆಪಿ ನಾಯಕರು ಕರ್ನಾಟಕಕ್ಕೆ ಲಕ್ಷಾಂತರ ಅಕ್ರಮ ನುಸುಳುಕೋರರು ಬಂದಿದ್ದಾರೆ ಎಂದು ಹಾದಿಬೀದಿಯಲ್ಲಿ ಭಾಷಣ ಮಾಡುತ್ತಾ ಎಸ್‌ಐಆರ್ ಅಗತ್ಯವಿದೆ ಎಂದು ಜನರನ್ನು ನಂಬಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ನುಸುಳುಕೋರರ ಪಟ್ಟಿ ಕೇಳಿದಾಗ ಚುನಾವಣಾ ಆಯೋಗ ನೀಡಿದ ವರದಿಯಲ್ಲಿ ಕೇವಲ ಇಬ್ಬರು ಮಹಿಳೆಯರು ಮಾತ್ರ ಪತ್ತೆಯಾಗಿದ್ದಾರೆ. ಇನ್ನುಳಿದವರು ನೇಪಾಳಿ ಸೆಕ್ಯುರಿಟಿ ಗಾರ್ಡ್‌ಗಳು ಹಾಗೂ ಶೈಕ್ಷಣಿಕ ಕೆಲಸಕ್ಕೆ ಬಂದ ಪಾಶ್ಚಿಮಾತ್ಯ ಪ್ರಜೆಗಳು. ಬರೀ ಇಬ್ಬರಿಗಾಗಿ ಇಡೀ ರಾಜ್ಯದ ಜನರಲ್ಲಿ ದ್ವೇಷ ಬಿತ್ತಿ, ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣ ಪೋಲು ಮಾಡಿದ್ದಕ್ಕೆ ಉತ್ತರಿಸುವವರು ಯಾರು ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು.

ಒಂದು ಕೋಟಿ ಮತದಾರರ ಹಕ್ಕು ಕಸಿಯುವ ಹುನ್ನಾರ?

ಕರ್ನಾಟಕದಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಯು ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಅಕ್ರಮ ಎಂದು ಅವರು ಆಪಾದಿಸಿದರು. “ಮ್ಯಾಪಿಂಗ್ ಇಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಸುಮಾರು 98 ಲಕ್ಷದಿಂದ 1 ಕೋಟಿ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಸತ್ತವರು ಮತ್ತು ಡಬಲ್ ಎಂಟ್ರಿಗಳನ್ನು ಹೊರತುಪಡಿಸಿದರೂ, ಇಂದಿಗೂ 70 ಲಕ್ಷಕ್ಕೂ ಅಧಿಕ ಜೀವಂತ ಮತದಾರರು ತಮ್ಮ ಹಕ್ಕು ಕಳೆದುಕೊಂಡಿದ್ದಾರೆ. ಬೆಂಗಳೂರಿನಂತಹ ನಗರದಲ್ಲಿ ಮತದಾರರ ಸಂಖ್ಯೆ ಕೇವಲ 53 ಲಕ್ಷ ಎಂದು ತೋರಿಸುತ್ತಿರುವುದು ಹಾಸ್ಯಾಸ್ಪದ. ಹಾಗಿದ್ದರೆ ಸರ್ಕಾರ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ವ್ಯಯಿಸಿ ರಸ್ತೆ, ಬಸ್‌ಗಳಂತಹ ಸೌಲಭ್ಯಗಳನ್ನು ಯಾರಿಗೆಂದು ಒದಗಿಸುತ್ತಿದೆ?” ಎಂದು ಅವರು ತೀವ್ರವಾಗಿ ಲೇವಡಿ ಮಾಡಿದರು.

ನನ್ನ ಮತದಾನದ ಹಕ್ಕನ್ನೇ ಕಸಿದಿದ್ದಾರೆ

ತಮ್ಮ ವೈಯಕ್ತಿಕ ಅನುಭವ ಹಂಚಿಕೊಂಡ ಅವರು, “ನನ್ನ ಹೆಸರೂ ಕೂಡ ಶಿಫ್ಟೆಡ್ ಎಂಬ ಕಾರಣಕ್ಕೆ ಪಟ್ಟಿಯಿಂದ ನಾಪತ್ತೆಯಾಗಿದೆ. ನನಗಾಗಿ ಸೃಷ್ಟಿಸಿರುವ ಸುಳ್ಳು ಆರೋಪಗಳಿಗೆ ಹೈಕೋರ್ಟ್ ಉತ್ತರ ಕೇಳುತ್ತಿದೆ. ನಾನು ಫಾರಂ 6 ಅನ್ನು ತುಂಬುವುದಿಲ್ಲ. ಏಕೆಂದರೆ ನಾನು ಹೊಸ ಮತದಾರನಲ್ಲ. ಫಾರಂ 6 ತುಂಬುವುದೆಂದರೆ ನಾನು ಈ ಹಿಂದೆ ಎಲ್ಲೂ ಮತದಾನ ಮಾಡಿಲ್ಲ ಎಂದು ಸುಳ್ಳು ಸಹಿ ಹಾಕಿದಂತೆ. ಹಳೆ ಮತದಾರರಿಗೆ ಫಾರಂ 8 ನೀಡುವ ಬದಲಾಗಿ ಜನರನ್ನು ಗೊಂದಲಕ್ಕೆ ದೂಡಲಾಗುತ್ತಿದೆ” ಎಂದು ಕಿಡಿಕಾರಿದರು.

ದಕ್ಷಿಣ ಕನ್ನಡದ ಜನರನ್ನು ಮಂಗ ಮಾಡಲಾಗುತ್ತಿದೆ

ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ, ಶಿಕ್ಷಣ ಮತ್ತು ಸೌಹಾರ್ದತೆ ಕೆಡಲು ಕಾರಣವಾಗಿರುವ ರಾಜಕೀಯ ಪಕ್ಷಗಳ ಬಗ್ಗೆ ಶೀಘ್ರವೇ ದತ್ತಾಂಶಗಳ ಸಮೇತ ವರದಿ ಬಿಡುಗಡೆ ಮಾಡುವುದಾಗಿ ತಿಳಿಸಿದ ಅವರು, “ಜಿಲ್ಲೆಯ ಯುವಕರು ಈ ಸುಳ್ಳು ಆಲೋಚನೆಗಳಿಂದ ಹೊರಬರಬೇಕು. ನಾವು ದೇಶವನ್ನು ಕಟ್ಟುವ ಕೆಲಸ ಮಾಡಬೇಕೇ ಹೊರತು ಕೇವಲ ರಾಜಕೀಯ ಪಕ್ಷಗಳನ್ನಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗಾಂಧಿ ಮಾರ್ಗದಲ್ಲೇ ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ಸ್ಪಷ್ಟಪಡಿಸಿದರು.

ShareTweetSendShare
Join us on:

Related Posts

charchge-barada-bjp-eega-padayatre-priyank-kharge

ಸ್ಟಿಂಗ್ ಪ್ರಕರಣದಲ್ಲಿ ಬಯಲಾಯಿತು ದೆಹಲಿ ನಂಟು: ಇದು ಬರೀ ಟ್ರೇಲರ್, ಪಿಕ್ಚರ್ ಅಭಿ ಬಾಕಿ ಹೈ ಎಂದು ಗುಡುಗಿದ ಪ್ರಿಯಾಂಕ್ ಖರ್ಗೆ

by Shwetha
November 2, 2026
0

ಕಲಬುರಗಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಚರ್ಚಾಸ್ಪದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ದೆಹಲಿ ನಿವಾಸದ ನಂಟು ಬಯಲಾಗುತ್ತಿದ್ದಂತೆಯೇ...

ರಾಜಕೀಯದಲ್ಲಿ ಮಹಿಳೆಯರು ಕೇವಲ ಕರಿಬೇವಿನ ಸೊಪ್ಪಿನಂತಾಗಿದ್ದಾರೆ: ಸಂಸತ್ತಿನಲ್ಲಿ ಮೀಸಲಾತಿ ಚರ್ಚೆ, ಸಂಪುಟದಲ್ಲಿ ಮಾತ್ರ ಮಹಿಳೆಯರಿಗಿಲ್ಲ ಸ್ಥಾನ- ಎಲ್ಲಾ ಪಕ್ಷಗಳ ಮನಸ್ಥಿತಿ ಒಂದೇ ಎಂದ ಕೈ ಹಿರಿಯ ನಾಯಕಿ

ರಾಜಕೀಯದಲ್ಲಿ ಮಹಿಳೆಯರು ಕೇವಲ ಕರಿಬೇವಿನ ಸೊಪ್ಪಿನಂತಾಗಿದ್ದಾರೆ: ಸಂಸತ್ತಿನಲ್ಲಿ ಮೀಸಲಾತಿ ಚರ್ಚೆ, ಸಂಪುಟದಲ್ಲಿ ಮಾತ್ರ ಮಹಿಳೆಯರಿಗಿಲ್ಲ ಸ್ಥಾನ- ಎಲ್ಲಾ ಪಕ್ಷಗಳ ಮನಸ್ಥಿತಿ ಒಂದೇ ಎಂದ ಕೈ ಹಿರಿಯ ನಾಯಕಿ

by Shwetha
November 2, 2026
0

ಹಾಸನ: ಅಡುಗೆಯ ರುಚಿ ಮತ್ತು ಘಮ ಹೆಚ್ಚಿಸಲು ಒಗ್ಗರಣೆಗೆ ಬಳಸಿ, ಊಟ ಮಾಡುವಾಗ ಎತ್ತಿ ಆಚೆ ಬಿಸಾಡುವ ಕರಿಬೇವಿನ ಸೊಪ್ಪಿನಂತೆ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳೆಯರನ್ನು ನಡೆಸಿಕೊಳ್ಳಲಾಗುತ್ತಿದೆ...

ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ: ಗ್ರೇಡ್ ಪದ್ಧತಿ ಕೈಬಿಟ್ಟು ಅಂಕ ನೀಡಲು ತೀರ್ಮಾನ – ಸಚಿವ ಮಧು ಬಂಗಾರಪ್ಪ ಅಧಿಕೃತ ಘೋಷಣೆ

ಹಾಲಿನ ದರ ಏರಿಕೆ ಸಮರ್ಥಿಸಿಕೊಳ್ಳಲು ಹೋಗಿ ಪೇಚಿಗೆ ಸಿಲುಕಿದ ಮಧು ಬಂಗಾರಪ್ಪ: ಮೂರು ವರ್ಷದಲ್ಲಿ ನಾಲ್ಕು ಬಾರಿ ಬೆಲೆ ಏರಿಸಿದರೂ ಏಳೆಂಟು ವರ್ಷದಿಂದ ಏರಿಕೆಯೇ ಆಗಿಲ್ಲ ಎಂದ ಸಚಿವರ ವಿರುದ್ಧ ನೆಟ್ಟಿಗರ ಆಕ್ರೋಶ

by Shwetha
November 2, 2026
0

ಶಿವಮೊಗ್ಗ: ರಾಜ್ಯದಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ಬರೋಬ್ಬರಿ 8 ರೂಪಾಯಿ ಹಾಗೂ ಮೊಸರಿನ ದರವನ್ನು 14 ರೂಪಾಯಿಗಳಷ್ಟು ಹೆಚ್ಚಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ...

ಹಾಲು, ಮೊಸರು ಆಯ್ತು ಈಗ ಬಸ್ ಟಿಕೆಟ್ ಸರದಿ: ನವೆಂಬರ್ 5ರಿಂದ ಪ್ರಯಾಣ ದರ ಏರಿಕೆ ಖಚಿತಪಡಿಸಿದ ಸಚಿವ ಬೈರತಿ ಸುರೇಶ್

ಹಾಲು, ಮೊಸರು ಆಯ್ತು ಈಗ ಬಸ್ ಟಿಕೆಟ್ ಸರದಿ: ನವೆಂಬರ್ 5ರಿಂದ ಪ್ರಯಾಣ ದರ ಏರಿಕೆ ಖಚಿತಪಡಿಸಿದ ಸಚಿವ ಬೈರತಿ ಸುರೇಶ್

by Shwetha
November 2, 2026
0

ಬೆಂಗಳೂರು: ಹಾಲು ಮತ್ತು ಮೊಸರಿನ ದರ ಏರಿಕೆಯ ಬಿಸಿಯಿಂದ ಇನ್ನೂ ಚೇತರಿಸಿಕೊಳ್ಳದ ರಾಜ್ಯದ ಜನಸಾಮಾನ್ಯರಿಗೆ ದೀಪಾವಳಿ ಹಬ್ಬದ ಬೆನ್ನಲ್ಲೇ ರಾಜ್ಯ ಸರ್ಕಾರ ಮತ್ತೊಂದು ಬೆಲೆ ಏರಿಕೆಯ ಆಘಾತ...

ಜ್ಞಾನೇಶ್ ಕುಮಾರ್ ಇಲ್ಲದಿದ್ದರೆ ಮೋದಿ ಪ್ರಧಾನಿ, ಶಾ ಗೃಹ ಸಚಿವರಾಗುತ್ತಿರಲಿಲ್ಲ: 2024ರ ಲೋಕಸಭಾ ಚುನಾವಣೆಯೇ ಅಕ್ರಮ-ಸಂವಿಧಾನ ರಕ್ಷಣೆಗೆ ಕೊನೆಯವರೆಗೂ ಹೋರಾಟ ಎಂದ ರಾಹುಲ್ ಗಾಂಧಿ

ಜ್ಞಾನೇಶ್ ಕುಮಾರ್ ಇಲ್ಲದಿದ್ದರೆ ಮೋದಿ ಪ್ರಧಾನಿ, ಶಾ ಗೃಹ ಸಚಿವರಾಗುತ್ತಿರಲಿಲ್ಲ: 2024ರ ಲೋಕಸಭಾ ಚುನಾವಣೆಯೇ ಅಕ್ರಮ-ಸಂವಿಧಾನ ರಕ್ಷಣೆಗೆ ಕೊನೆಯವರೆಗೂ ಹೋರಾಟ ಎಂದ ರಾಹುಲ್ ಗಾಂಧಿ

by Shwetha
November 2, 2026
0

ನವದೆಹಲಿ: ರಾಷ್ಟ್ರ ರಾಜಧಾನಿಯ ರಾಮಲೀಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಇಂಡಿಯಾ ಮೈತ್ರಿಕೂಟದ ಬೃಹತ್ ಸಮಾವೇಶದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರ ಹಾಗೂ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram