Shraddha Murder : ಮಾಂಸ ಸಂರಕ್ಷಣೆಯ ತರಬೇತಿ ಅನುಭವದಿಂದಲೇ ಶ್ರದ್ಧಾಳನ್ನ ಕೊಂದ ಅಫ್ತಾಭ್
ದೇಶಾದ್ಯಂತ ಸಂಚಲನ ಮೂಡಿಸಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಾದ-ಪ್ರತಿವಾದಗಳು ಮುಂದುವರಿದಿವೆ. ಆರೋಪಿ ಅಫ್ತಾಬ್ ಬಾಣಸಿಗ(chef)ನಾಗಿದ್ದಅನುಭವದಿಂದಲೇ ಶ್ರದ್ಧಾಳನ್ನು ಕೊಂದಿದ್ದಾನೆ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಕಳೆದ ವರ್ಷ ಅಫ್ತಾಬ್ ಪೂನಾವಾಲಾ ತನ್ನ ಗೆಳತಿ ಶ್ರದ್ಧಾಳನ್ನ ಬರ್ಬರವಾಗಿ ಹತ್ಯೆ ಮಾಡಿದ್ದ. ಕೊಲೆಯ ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ತನ್ನ ಮನೆಯ ಫ್ರಿಡ್ಜ್ ನಲ್ಲಿ ಮೂರು ವಾರಗಳ ಕಾಲ ಬಚ್ಚಿಟ್ಟಿದ್ದ. ಆನಂತರ ದಿನಕ್ಕೊಂದರಂತೆ ದೆಹಲಿಯ ವಿವಿಧ ಸ್ಥಳಗಳಲ್ಲಿ ಶ್ರದ್ಧಾಳ ದೇಹದ ಪ್ರತಿಯೊಂದು ಭಾಗವನ್ನ ಬಿಸಾಕಿದ್ದಾನೆ. ಯುವತಿಯ ತಂದೆ ನೀಡಿದ ದೂರಿನ ಮೇರೆಗೆ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸಿ ಆರೋಪಿ ಅಫ್ತಾಬ್‌ನನ್ನು ಬಂಧಿಸಿದ್ದಾರೆ.
ಕಳೆದ ಫೆಬ್ರವರಿ 7 ರಂದು ಪೊಲೀಸರು 6,629 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದರು. ಬಳಿಕ ಫೆಬ್ರವರಿ 21ರಂದು ದೆಹಲಿ ನ್ಯಾಯಾಲಯ ಈ ಕುರಿತು ವಿಚಾರಣೆ ನಡೆಸಿತ್ತು.ಈ ಸಂದರ್ಭದಲ್ಲಿ ಪೊಲೀಸರು ಅಫ್ತಾಬ್‌ಗೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಅಫ್ತಾಬ್ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ. ಬಾಣಸಿಗನಾಗಿರುವುದರಿಂದ, ಯಾವ ಚಾಕುವನ್ನು ಬಳಸಬೇಕೆಂದು ಅವನಿಗೆ ತಿಳಿದಿದೆ. ಮಾಂಸವನ್ನು ಹೇಗೆ ಕತ್ತರಿಸಬೇಕೆಂದು ತಿಳಿದಿದೆ. ಮಾಂಸ ಕೊಳೆಯದಂತೆ ಫ್ರಿಡ್ಜ್‌ನಲ್ಲಿ ಬಚ್ಚಿಡುವುದು ಅಫ್ತಾಬ್‌ಗೂ ಗೊತ್ತಿದೆ. ಅಫ್ತಾಬ್ ತನ್ನ ಅನುಭವದ ಆಧಾರದ ಮೇಲೆ ಕೊಲೆ ಮಾಡಿದ್ದಾನೆ ಮತ್ತು ಸಾಕ್ಷ್ಯವನ್ನು ನಾಶಪಡಿಸಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಆತನೇ ತಪ್ಪಿತಸ್ಥನೆಂದು ತೀರ್ಮಾನಿಸಲು ಎಲ್ಲಾ ವೈಜ್ಞಾನಿಕ ಮತ್ತು ತರ್ಕಬದ್ಧ ಸಾಕ್ಷ್ಯಗಳಿವೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನ ಮಾರ್ಚ್ 20ಕ್ಕೆ ಮುಂದೂಡಲಾಗಿದೆ.
Shraddha Murder: Aftabh killed Shraddha because of the meat preservation training