Shraddha Murder Case: ಅಫ್ತಾಬ್‌ಗೆ 2 ವಾರಗಳ ನ್ಯಾಯಾಂಗ ಬಂಧನ….
ಗೆಳತಿ ಶ್ರದ್ಧಾ ವಾಕರ್ ಳನ್ನ 35 ತುಂಡುಗಳಾಗಿ ಕತ್ತರಿಸಿದ ಅಫ್ತಾಬ್ ಪೂನಾವಾಲಾಗೆ ದೆಹಲಿ ನ್ಯಾಯಾಲಯ 13 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ನ್ಯಾಯಾಲಯದ ಆದೇಶದ ಪ್ರಕಾರ ಪೊಲೀಸರು ಅಫ್ತಾಬ್‌ನನ್ನು ತಿಹಾರ್ ಜೈಲಿಗೆ ಕರೆದೊಯ್ಯಲಿದ್ದಾರೆ.
ಅಫ್ತಾಬ್ ಮೇ 18 ರಂದು ದೆಹಲಿಯ ಮೆಹ್ರೌಲಿ ಪ್ರದೇಶದಲ್ಲಿನ ಫ್ಲಾಟ್‌ನಲ್ಲಿ ಶ್ರದ್ಧಾ ಅವರನ್ನು ಹತ್ಯೆ ಮಾಡಿದ್ದ. ಮರುದಿನ ಅವಳ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದಾನೆ. ಶವವನ್ನ ತುಂಡುಗಳಾಗಿ ಕತ್ತರಿಸುವ ಮೊದಲು ಶ್ರದ್ಧಾ ಮೇಲೆ ಕುದಿಯುವ ನೀರನ್ನ ಸುರಿದಿದ್ದಾನೆ. ಸುಲಭವಾಗಿ ಕತ್ತರಿಸಲು ಕುದಿಯುವ ನೀರನ್ನ ಸುರಿದಿದ್ದಾಗಿ ಅಫ್ತಾಬ್ ಪೊಲೀಸರಿಗೆ ತಿಳಿಸಿದ್ದಾರೆ.
35 ಪೀಸ್ ಗಳನ್ನ 18 ಪ್ಯಾಕ್ಗಳಲ್ಲಿ ತುಂಬಿಸಿ 18 ದಿನಗಳವರೆಗೆ ಪ್ರತಿದಿನ 2 ಗಂಟೆಗೆ ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ಬಿಸಾಡಿದ್ದಾನೆ. ನವೆಂಬರ್ 11 ರಂದು ಶ್ರದ್ಧಾ ತಂದೆ ಪೊಲೀಸರಿಗೆ ದೂರು ನೀಡಿದಾಗ ಸತ್ಯ ಬೆಳಕಿಗೆ ಬಂದಿದೆ. ಆರು ತಿಂಗಳ ಹಿಂದೆ ಶ್ರದ್ಧಾಳನ್ನು ಬರ್ಬರವಾಗಿ ಕೊಂದಿದ್ದ ಅಫ್ತಾಬ್, ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.
ಮೆಹ್ರೌಲಿ ಅರಣ್ಯ ಪ್ರದೇಶದಿಂದ ಪೊಲೀಸರು ಇದುವರೆಗೆ ಶ್ರದ್ಧಾಳ 13 ಮೂಳೆಗಳನ್ನು ವಶಪಡಿಸಿಕೊಂಡಿದ್ದಾರೆ. ಡಿಎನ್ಎ ಪರೀಕ್ಷೆಯ ಮೂಲಕ ಇವು ಅವಳದೇ ಎಂದು ಗುರುತಿಸಲಾಗಿದೆ.
ಪ್ರಕರಣದ ತನಿಖೆಯ ಭಾಗವಾಗಿ ದೆಹಲಿ ಪೊಲೀಸರು ಡೇಟಿಂಗ್ ಅಪ್ಲಿಕೇಶನ್ ಬಂಬಲ್‌ಗೆ ಪತ್ರ ಬರೆದಿದ್ದಾರೆ. ಅವರ ತನಿಖೆಯಲ್ಲಿ ಅಫ್ತಾಬ್ ಒಂದೇ ಸ್ಥಳದಲ್ಲಿ ಅನೇಕ ಮಹಿಳೆಯರನ್ನು ಭೇಟಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಈ ವೇಳೆ ಶುಕ್ರವಾರ ರೋಹಿಣಿಯಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್) ಅಫ್ತಾಬ್ ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಪೋಲೋಗ್ರಾಫ್ ಪರೀಕ್ಷೆಗೆ ಸಂಬಂಧಿಸಿದ ಎಲ್ಲಾ ಸೆಷನ್‌ಗಳು ಪೂರ್ಣಗೊಂಡಿವೆ ಮತ್ತು ಈ ಪರೀಕ್ಷೆಯಲ್ಲಿ ಪೂರ್ವ, ಮುಖ್ಯ ಮತ್ತು ಪೋಸ್ಟ್ ಎಂಬ ಮೂರು ಹಂತಗಳಿವೆ ಎಂದು ಎಫ್‌ಎಸ್‌ಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಜ್ಞರು ಈ ಪರೀಕ್ಷೆಗಳನ್ನು ವಿಶ್ಲೇಷಿಸಿ ವರದಿ ಸಿದ್ಧಪಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ವರದಿಯಿಂದ ತಜ್ಞರು ತೃಪ್ತರಾಗದಿದ್ದರೆ ಮತ್ತೊಮ್ಮೆ ಅಫ್ತಾಬ್ ಪರೀಕ್ಷೆ ಮಾಡಲಿದ್ದಾರೆ. ವರದಿ ಆಧರಿಸಿ ನಾರ್ಕೋ ಅನಾಲಿಸಿಸ್ ಪರೀಕ್ಷೆ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಸೋಮವಾರ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಅಫ್ತಾಬ್ ನಾರ್ಕೋ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Shraddha Murder Case: 2 weeks judicial custody for Aftab….