Shraddha Murder Case : ಶ್ರದ್ಧಾ ದೇಹ ತುಂಡರಿಸಲು ಗರಗಸ ಬಳಿಸಿದ್ದ ಅಫ್ತಾಬ್….
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಶ್ರದ್ಧಾ ಮರ್ಡರ್ ಕೇಸ್ ನಲ್ಲಿ ಅಂದರ್ ಆಗಿರುವ ಅಫ್ತಾಬ್ ವಿಚಾರಣೆ ಜಾರಿಯಲ್ಲಿದೆ..ತನ್ನೊಂದಿಗೆ ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದ ಶ್ರದ್ಧಾಳನ್ನ ಹತ್ಯೆಗೈದಿದ್ದ ಅಫ್ತಾಬ್ ಆಕೆಯನ್ನ 30 ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ ಕಾಡಿನಲ್ಲಿ ಹೋಗಿ ಬೇರೆ ಬೇರೆ ಸ್ಥಳಗಳಲ್ಲಿ ಹೂತು ಬಂದಿದ್ದ..
ಅಫ್ತಾಬ್ ಅಮೀನ್ ಪೂನಾವಾಲಾ ಪ್ರಕರಣದ ತನಿಖೆ ಮುಂದುವರಿದಂತೆ ಆಘಾತಕಾರಿ ಸಂಗತಿಗಳು ಹೊರಬೀಳುತ್ತಿವೆ. ಶ್ರದ್ಧಾ ದೇಹವನ್ನ ತುಂಡರಿಸಲು ಈತ ಗರಗಸದ ಬಳಕೆ ಮಾಡಿದ್ದಾಗಿ ಗೊತ್ತಾಗಿದೆ.. ಮೂಳೆಗಳ ಪರೀಕ್ಷೆಯಲ್ಲಿ ಈ ವಿಚಾರ ದೃಢಪಟ್ಟಿದೆ.. ದೆಹಲಿಯ ವಿವಿಧೆಡೆ ಸಂಗ್ರಹಿಸಿದ್ದ ಶ್ರದ್ಧಾ ವಾಕರ್ 23 ಮೂಳೆಗಳನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಏಮ್ಸ್ ಆಸ್ಪತ್ರೆಗೆ ಕಳುಹಿಸಿದ್ದರು.
ಗರಗಸ ಬಳಸಿ ತುಂಡರಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಜನವರಿ ಕೊನೆಯ ವಾರದಲ್ಲಿ ಪ್ರಕರಣ ಕುರಿತಂತೆ ಪೊಲೀಸರು ದೆಹಲಿಯ ಸಾಕೆತ್ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ.
ಶ್ರದ್ಧಾ ವಾಲಕರ್ ತಂದೆಯ ಡಿಎನ್‌ಎ ಜೊತೆ ದಕ್ಷಿಣ ದೆಹಲಿಯ ಅರಣ್ಯ ಪ್ರದೇಶದಲ್ಲಿ ಸಿಕ್ಕ ಮೂಳೆಗಳ ಡಿಎನ್‌ಎ ಹೊಂದಿಕೆಯಾದ ಹಿನ್ನೆಲೆಯಲ್ಲಿ ಆಟೊಪ್ಸಿ ನಡೆಸಲಾಯಿತು ಎಂದು ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯ ತಿಳಿಸಿದೆ. ಆರೋಪಿ ಆಫ್ತಾಬ್‌ನ ಪಾಲಿಗ್ರಾಫ್ ಮತ್ತು ನಾರ್ಕೊ ಪರೀಕ್ಷೆಯ ವರದಿಯನ್ನು ದೆಹಲಿ ಪೊಲೀಸರು ಪಡೆದುಕೊಂಡಿದ್ದಾರೆ.
Shraddha Murder Case: Aftab used a saw to dismember Shraddha’s body.