Shraddha Murder Case : OlX ನಲ್ಲಿ ಮೊಬೈಲ್ ಮಾರಿದ್ದ ಹಂತಕ ಅಫ್ತಾಬ್..
ನವದೆಹಲಿ : ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಶ್ರದ್ಧಾ ಮರ್ಡರ್ ಕೇಸ್ ನಲ್ಲಿ ದಿನೇ ದಿನೇ ಹೊಸ ಹೊಸ ವಿಚಾರಗಳು ಗೊತ್ತಾಗುತ್ತಿದೆ.. ಹೊಸ ಹೊಸ ತಿರುವು ಪಡೆದು ಕೊನೆಗೆ ಲವ್ ಜಿಹಾದ್ ಅನುಮಾನವೂ ಹುಟ್ಟಿದೆ..
ಆರೋಪಿ ಅಫ್ತಾಬ್ ಸಾಕ್ಷಿ ನಾಶಕ್ಕಾಗಿ ಮೊಬೈಲ್ ಅನ್ನ OLX ನಲ್ಲಿ ಮಾರಿದ್ದ ಬ ವಿಚಾರ ಇದೀಗ ತನಿಖೆಯಿಂದ ಪತ್ತೆಯಾಗಿದೆ..
ಹೌದು..!
ಶ್ರದ್ಧಾಳನ್ನ ಅತಿ ಕ್ರೂರವಾಗಿ ಹತ್ಯ ಮಾಡಿದ್ದ ಪಾಪಿ ಅಫ್ತಾಬ್ ಗೆ ಮರಣ ದಂಡನೆಯಾಗಬೇಕೆಂಬ ಕೂಗು ಕೇಳಿ ಬರುತ್ತಿದೆ.. ಅಫ್ತಾಬ್ ಹತ್ಯೆ ಮಾಡಿದ ನಂತರ ವಿವಿಧ ಡೇಟಿಂಗ್ ಆಪ್ ಗಳಲ್ಲಿ ಸಕ್ರಿಯನಾಗಿದ್ದ…
ಹಲವು ಯುವತಿಯರ ಜೊತೆ ಮಾತನಾಡುತ್ತಿದ್ದ. ಅದಾದ ಬಳಿಕ ಕೊಲೆ ಮಾಡಿದ್ದಕ್ಕೆ ಸಾಕ್ಷಿ ಸಿಗಬಾರದು ಎಂದು ತನ್ನ ಫೋನ್ ಅನ್ನು Olx ಮೂಲಕ ಮಾರಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ..
ಏನಿದು ಪ್ರಕರಣ..??
ಅಫ್ತಾಬ್ ಹಾಗೂ ಮೃತ ಶ್ರದ್ಧಾ ( 26 ವರ್ಷ) ಇಬ್ಬರೂ ಲಿವ್ ಇನ್ ರಿಲೀಷನ್ ಶಿಪ್ ನಲ್ಲಿದ್ದರು.. ಈ ಇಬ್ಬರೂ ಕೂಡ ಡೇಟಿಂಗ್ ಅಪ್ಲಿಕೇಶನ್ ಬಂಬಲ್ ಮೂಲಕ ಪರಸ್ಪರ ಭೇಟಿಯಾಗಿದ್ದರು.
ಅದಾದ ಬಳಿಕ ಕಳೆದ 3 ವರ್ಷಗಳಿಂದ ಒಟ್ಟಿಗೆ ಇದ್ದರು. ಆದರೆ ಮದುವೆ ವಿಚಾರಕ್ಕೆ ಜಗಳವಾಗಿ ಇಬ್ಬರ ನಡುವೆ ಗಲಾಟೆ ಶುರುವಾಗಿತ್ತು..
ಈ ಜಗಳ ತಾರಕಕ್ಕೇರಿದ ಬೆನ್ನಲ್ಲೇ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ದೇಹವನ್ನ 35 ಭಾಗಗಳಲ್ಲಿ ಪೀಸ್ ಮಾಡಿ ಅದನ್ನು ಫ್ರಿಡ್ಜ್ ನಲ್ಲಿ ಇಟ್ಟು ಕಾಡಿನಲ್ಲಿ ವಿವಿಧ ಜಾಗಗಳಲ್ಲಿ ಹೂತುಹಾಕಿದ್ದಾನೆ..
ಈ ರೀತಿ ಎಲ್ಲಾ ಭಾಗಗಳನ್ನೂ ವಿಲೇವಾರಿ ಮಾಡಲು ಆತ ಸುಮಾರು 18 ದಿನಗಳನ್ನ ತೆಗೆದುಕೊಂಡಿದ್ದಾನೆ.. ಪ್ರತಿ ದಿನ ಮಧ್ಯರಾತ್ರಿ 2 ಗಂಟೆಗೆ ಕಾಡಿಗೆ ತೆರಳುತ್ತಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ..








