IPL 2022 | ಅತಿಯಾದ ಆತ್ಮವಿಶ್ವಾಸಕ್ಕಿಂತ ಆತ್ಮವಿಶ್ವಾಸದಿಂದ ಆಡೋಣ
ಐಪಿಎಲ್-2022 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸತತ ಐದನೇ ಬಾರಿಗೆ ಸೋಲು ಕಂಡಿದೆ.
ಗುರುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ವಿಕೆಟ್ಗಳಿಂದ ಶ್ರೇಯಸ್ ಅಯ್ಯರ್ ಪಡೆ ಸೋಲು ಕಂಡಿದೆ.
ಪಂದ್ಯದ ನಂತರ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ತಂಡದ ಪ್ರದರ್ಶನದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಸೋಲಿಗೆ ಆ ಕಾರಣ ಈ ಕಾರಣ ಅಂತಾ ಹೇಳದೇ ತಪ್ಪುಗಳನ್ನು ಗುರುತಿಸಬೇಕಾಗಿದೆ.

ಆರಂಭದಲ್ಲಿಯೇ ಎರಡು ವಿಕೆಟ್ ಕಳೆದುಕೊಂಡಿದ್ದು, ಟಾಪ್ ಆರ್ಡರ್ ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದು ತಂಡದ ಮೇಲೆ ಪರಿಣಾಮ ಬೀರುತ್ತಿದೆ.
ನಾವು ಸರಿಯಾದ ಬಲಿಷ್ಠ ತಂಡ ಕಟ್ಟುವಲ್ಲಿ ವಿಫಲವಾಗುತ್ತಿದ್ದೇವೆ ಎಂದು ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ.
ನಾವು ಆಕ್ರಮಣಕಾರಿಯಾ ಆಡಬೇಕಿದೆ. ಇನ್ನೂ ಐದು ಪಂದ್ಯಗಳಿವೆ. ಖಂಡಿತವಾಗಿ ನಾವು ಆ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತೇವೆ.
ಮ್ಯಾನೆಜ್ ಮೆಂಟ್ ಇಟ್ಟುಕೊಂಡಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ. ಕಳೆದ ಪಂದ್ಯಗಳ ಬಗ್ಗೆ ಮರೆತು ಮುಂದೆ ಸಾಗುತ್ತೇವೆ.
ಅತಿಯಾದ ಆತ್ಮವಿಶ್ವಾಸದಿಂದ ಅಲ್ಲದೇ ಆತ್ಮವಿಶ್ವಾಸದಿಂದ ಆಟವಾಡುತ್ತೇವೆ ಎಂದಿದ್ದಾರೆ ಶ್ರೇಯಸ್ ಅಯ್ಯರ್.
shreyas-iyer-consecutive-5th-loss-no-excuses