`ಭಂಡಾಸುರ- ಮೊಂಡಾಸುರ’ರಿಗೆ ತಕ್ಕ ಪಾಠ : ಸಿದ್ದು, ಡಿಕೆಶಿ ವಿರುದ್ಧ ರಾಮುಲು ಕಿಡಿ
ಚಿತ್ರದುರ್ಗ : ರಾಜ್ಯದಲ್ಲಿ ಭಂಡಾಸುರ- ಮೊಂಡಾಸುರ ಇಬ್ಬರೂ ನಾಯಕರು ಇದ್ದಾರೆ. ಈ ಇಬ್ಬರೂ ಯಾರು ಎಂದು ದೇಶದ ಜನರಿಗೆ ಗೊತ್ತಿದೆ.
ಈ ಭಂಡಾಸುರ- ಮೊಂಡಾಸುರರಿಗೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಸಚಿವ ಶ್ರೀ ರಾಮುಲು ಕಿಡಿಕಾರಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭಂಡಾಸುರ- ಮೊಂಡಾಸುರ ಎಂದು ಕುಟುಕಿದರು.
ಮುಳಗುತ್ತಿರುವ ಪಕ್ಷ ಬಿಜೆಪಿ ಎಂದು ಡಿಕೆಶಿ ಹೇಳಿದ್ದಾರೆ. ಪ್ರಧಾನಿ ಮೋದಿ ಅವರನ್ನ ಹಿಯ್ಯಾಳಿಸಿ ದೊಡ್ಡವರು ಆಗಬೇಕು ಎಂದು ತಿಳಿದಿದ್ದಾರೆ.
ಮೊಂಡಸೂರಿಗೆ- ಭಂಡಸೂರರಿಗೆ ಈ ಭಾರಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದ್ದಾರೆ.
ನಿರಾಣಿ ಸಿಎಂ ಎಂಬ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿ, ಇದು ಈಶ್ವರಪ್ಪ ಅವರ ವೈಯಕ್ತಿಕ ಹೇಳಿಕೆ, ಈ ಬಗ್ಗೆ ನಾನು ಏನೂ ಮಾತನಾಡಲ್ಲ.
ಏನೇ ಮಾಡಬೇಕು ಎಂದರೂ ಕೂಡಾ ಪಕ್ಷ, ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು.
ಬಿಟ್ ಕಾಯಿನ್ ವಿಚಾರವಾಗಿ ಮಾತನಾಡಿ, ದಾಖಲಾತಿ ಇದೆ ಎಂದು ಭಂಡಾಸುರು ಹೇಳುತ್ತಿದ್ದರು, ಯಾವುದೇ ದಾಖಲಾತಿ ಇಲ್ಲ. ಬುಟ್ಟಿಯಲ್ಲಿ ಹಾವಿದೆ ಎಂದು ಹೇಳುತ್ತಿದ್ದಾರೆ.
ನಮ್ಮ ಪಕ್ಷದಲ್ಲಿ ಯಾವುದೇ ಕಚ್ಚಾಟ ಇಲ್ಲ, ಸಮಗ್ರ ಅಭಿವೃದ್ಧಿ ಮಾಡುತ್ತಿದ್ದೇನೆ. ಕೊವೀಡ್- ಓಮಿಕ್ರೋನ್ ಎರಡನ್ನ ಸಮಗ್ರವಾಗಿ ಎದುರಿಸುತ್ತಿದ್ದೇವೆ.
ನಮ್ಮ ಪಕ್ಷದಲ್ಲಿ ಯಾವುದೇ ಕಚ್ಚಾಟ ಇಲ್ಲ, ಕಾಂಗ್ರೆಸ್ ನಲ್ಲಿ ಕಚ್ಚಾಟ ಇದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.