ಬಳ್ಳಾರಿ, 2008ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿಯ ಶಕ್ತಿ ಕೇಂದ್ರವಾಗಿ ಗುರುತಿಸಿಕೊಂಡಿದ್ದ ಪ್ರದೇಶ. ರೆಡ್ಡಿ ಸಹೋದರರು, ಶ್ರೀರಾಮುಲು( Shriramulu Janardhan ) ಕರ್ನಾಟಕ ಕೇಸರಿ ಪಡೆಯ ಬಲವಾಗಿದ್ದರು. 2008 ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸಿತ್ತು. ಮೊಟ್ಟ ಮೊದಲ ಬಾರಿ ದಕ್ಷಿಣ ಭಾರತದಲ್ಲಿ ಕಮಲ ಪಡೆ ಅಧಿಕಾರಕ್ಕೆ ಬಂದಿತ್ತು. ಇದರ ಹಿಂದೆ ರೆಡ್ಡಿ ಬ್ರದರ್ಸ್ ಶ್ರಮ ತುಂಬಾ ಇತ್ತು.
ಇದೇ ಕಾರಣಕ್ಕಾಗಿ ಅಂದು ರಾಜ್ಯದ ಅಧಿಕಾರದ ಗದ್ದುಗೆ ಹಿಡಿದ ಬಿಎಸ್ ಯಡಿಯೂರಪ್ಪ, ರೆಡ್ಡಿ ಸಹೋದರರಿಗೆ, ಶ್ರೀ ರಾಮುಲುಗೆ ಸಂಪುಟದಲ್ಲಿ ಪ್ರಮುಖ ಖಾತೆಗಳನ್ನು ನೀಡಿದ್ದರು. ಆಗಲೂ ಆರೋಗ್ಯ ಸಚಿವರಾಗಿದ್ದ ಬಿ. ಶ್ರೀ ರಾಮುಲು ರಾಜ್ಯಕ್ಕೆ 108 ರ ಆಂಬ್ಯುಲೆನ್ಸ್ ಪರಿಚಯಿಸಿದರು. ಇದು ಯಶಸ್ವಿ ಯೋಜನೆ ಕೂಡ ಆಗಿತ್ತು.
ಆದ್ರೆ 2008 ರಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಪಾತ್ರ ವಹಿಸಿದ್ದ ರೆಡ್ಡಿ ಸಹೋದರರು, ಶ್ರೀ ರಾಮುಲು ತಂಡ ಈಗ ಬಿಜೆಪಿಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲಾ ಎಂಬಂತೆ ಆಗಿದೆ.
108 ರ ಅಂಬ್ಯುಲೇನ್ಸ್ ರಾಜ್ಯಕ್ಕೆ ಪರಿಚಯಿಸಿದ ಶ್ರೀ ರಾಮುಲುಗೆ ಆರೋಗ್ಯ ಖಾತೆಯಿಂದ ಕೋಕ್, ಜತೆಗೆ ಹಿಂದೂಳಿದ ವರ್ಗಗಳ ಖಾತೆಯನ್ನು ಅವರಿಂದ ಕಿತ್ತುಕೊಂಡು ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿಯನ್ನ ನೀಡಲಾಗಿದೆ. ಇನ್ನು ಜನಾರ್ಧನ್ ರೆಡ್ಡಿ ಸಹೋದರರಾದ ಕರುಣಾಕರ್ ರೆಡ್ಡಿ, ಸೋಮಶೇಖರ್ ರೆಡ್ಡಿ ಶಾಸಕರಾಗಿ ಅಷ್ಟೆ ಉಳಿದ್ರು.
ಇದನ್ನೂ ಓದಿ : ಮುಸ್ಲಿಂರೆಂದರೆ ಕಾಂಗ್ರೆಸ್, ಬಿಜೆಪಿಯೆಂದರೆ ಹಿಂದೂ : ಈಶ್ವರಪ್ಪ
ಅದರಲ್ಲೂ 2018 ಚುನಾವಣಾ ಪ್ರಚಾರದ ವೇಳೆ ಸಿಎಂ ಬಿಎಸ್ ಯಡಿಯೂರಪ್ಪ ನವರು, ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಪಟ್ಟ ಕೊಡ್ತೇವೆ ಎಂದು ಹೇಳಿ ಆ ಸಮುದಾಯದ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಆ ಸಮುದಾಯದ ನಾಯಕರಾಗಿ ಗುರುತಿಸಿಕೊಂಡಿದ್ದ ರಾಮುಲು ಪಕ್ಕಾ ಡಿಸಿಎಂ ಆಗ್ತಾರೆ ಎಂದು ಸಮುದಾಯದವರು ಬಿಜೆಪಿಗೆ ಮತ ನೀಡಿದ್ದರು.
ಆದ್ರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಆಗಿ ಒಂದೂವರೆ ವರ್ಷ ಕಳೆದರೂ ರಾಮುಲು ಡಿಸಿಎಂ ಆಗಲಿಲ್ಲ. ಬದಲಾಗಿ ಅವರ ಬಳಿ ಇದ್ದ ಆರೋಗ್ಯ ಇಲಾಖೆ ಖಾತೆಯನ್ನೂ ಹಿಂಪಡೆಯಲಾಗಿದೆ.
ಒಟ್ಟಾರೆ ಒಂದು ಕಾಲದಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆ ಮಾಡಲು ಮೂಲ ಕಾರಣಿಕರ್ತರಾಗಿದ್ದವರೇ ಇಂದು ಮೂಲೆಗುಂಪು ಆಗಿದ್ದಾರೆ.
ಇದನ್ನೂ ಓದಿ : ಶೋಷಿತರ ಸೇವೆ ಮಾಡಲು ಶ್ರೀರಾಮುಲು ಅತ್ಯಂತ ಸೂಕ್ತ ವ್ಯಕ್ತಿ : ಈಶ್ವರಪ್ಪ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel