ಸಲಾರ್ ಬೆಡಗಿ ಶೃತಿಹಾಸನ್ ಗೆ ಹುಟ್ಟು ಹಬ್ಬದ ಸಂಭ್ರಮ….
ಕಮಲ್ ಹಾಸನ್ ಪುತ್ರಿ ನಟಿ ಶೃತಿ ಹಾಸನ್ ಇಂದು ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದಾರೆ. ಶೃತಿ ಹುಟ್ಟು ಹಬ್ಬದ ಪ್ರಯುಕ್ತ ಪ್ರಭಾಸ್ ಅಭಿನಯದ ಸಲಾರ್ ಚಿತ್ರತಂಡ ಸ್ಪೆಷಲ್ ಪೋಸ್ಟರ್ ಒಂದನ್ನ ಬಿಡುಗಡೆಮಾಡಿದೆ.
ಸಲಾರ್ ಚಿತ್ರದಲ್ಲಿ ಶೃತಿ ಪಾತ್ರದ ಹೆಸರನ್ನ ಬಿಡುಗಡೆಗೊಳಿಸಲಾಗಿದೆ, ಪಾತ್ರಕ್ಕೆ ಆದ್ಯಾ ಎಂದು ಹೆಸರಿಡಲಾಗಿದೆ. ಸಲಾರ್ ಚಿತ್ರವನ್ನ ನಿರ್ದೇಶನ ಮಾಡುತ್ತಿರು ಪ್ರಶಾಂತ್ ನೀಲ್ ಟ್ವೀಟರ್ ನಲ್ಲಿ ಹುಟ್ಟು ಹಬ್ಬಕ್ಕೆ ವಿಶ್ ಮಾಡಿದ್ದಾರೆ. shruthi haasan plyas aadyaa role in prabhas salaar movie.
#Salaar ನ ಭಾಗವಾಗಿದ್ದಕ್ಕಾಗಿ ಮತ್ತು ಸೆಟ್ಗಳಿಗೆ ಸ್ವಲ್ಪ ಬಣ್ಣವನ್ನು ತಂದಿದ್ದಕ್ಕಾಗಿ ಧನ್ಯವಾದಗಳು! ಎಂದು ಪ್ರಶಾಂತ್ ನೀಲ್ ಬರೆದುಕೊಂಡಿದ್ದಾರೆ.. ಕಲ್ಲಿದ್ದಲು ಗಣಿಗಾರಿಕೆ ಮಾಫಿಯಾ ಹಿನ್ನಲೆಯಲ್ಲಿ ನಡೆಯುವ ಈ ಆಕ್ಷನ್ ಥ್ರಿಲ್ಲರ್ ನಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಶೃತಿ ಹಾಸನ್ ಕಾಣಿಸಿಕೊಂಡಿದ್ದಾರೆ.
ಸಲಾರ್ ನಿರ್ಮಾಣಕ್ಕೆ ಬಂಡವಾಳ ಹೂಡುತ್ತಿರುವ ಹೊಂಬಾಳೆ ಫಿಲಂಸ್ ಟ್ವೀಟ ಮಾಡಿ ಬಹು ಪ್ರತಿಭಾವಂತ ಬಹುಮುಖ ಪ್ರತಿಭೆ ಶೃತಿ ಹಾಸನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನ ಕೋರಿದೆ. ಸೌಂದರ್ಯ ಮತ್ತು ಸೊಬಗಿನ ಗಣಿ. ನಮ್ಮ ಆದ್ಯಾ ಯಾವಾಗಲು ಉನ್ನತ ಮಟ್ಟದಲ್ಲಿ ಗ್ಲಾಮರಸ್ ಆಗಿರುತ್ತಾರೆ ಎಂದು ಬರೆದುಕೊಂಡಿದೆ.
ಸದ್ಯ ಕರೋನಾದಿಂದಾಗಿ ಸಲಾರ್ ಚಿತ್ರದ ಶೂಟಿಂಗ್ ಗೆ ಬ್ರೇಕ್ ಬಿದ್ದಿದೆ. ಈ ಹಿಂದೆ ಏಪ್ರಿಲ್ 14 ರಂದು ಚಿತ್ರವನ್ನ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೆಳಿಕೊಂಡಿತ್ತು ಅಂದು ಕೆಜಿಎಫ್ 2 ಚಿತ್ರ ಬರುತ್ತಿರುವುದರಿಂದ. ಸಲಾರ್ ಚಿತ್ರವನ್ನ ಬಿಡುಗಡೆಯನ್ನ ಮುಂದೂಡಲಾಗಿದೆ. ಚಿತ್ರದಲ್ಲಿ ಜಗಪತಿಬಾಬು ಪ್ರಮುಖ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ…