ಕೋವಿಡ್ ಸೋಂಕಿತ ಸ್ನೇಹಿತರಿಗೆ ಬೆಡ್ ಕೊಡಿಸಲು 13 ಗಂಟೆಗಳ ಕಾಲ ಪರದಾಡಿದ ಶ್ರುತಿ ಹರಿಹರನ್
ದೇಶದಲ್ಲಿ ಕೊರೊನಾರ್ಭಟಕ್ಕೆ ಜನ ತತ್ತರಿಸಿಹೋಗಿದ್ದಾರೆ. ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ಸಿಗದೇ, ಬೆಡ್ ಕೊರತೆ , ಆಕ್ಸಿಜನ್ ಕೊರತೆಯಿಂದಾಗಿ ನಿತ್ಯ ಸಾವಿರಾರು ಜನ ಸಾಯುತ್ತಿದ್ದಾರೆ. ಸೆಲೆಬ್ರಿಟಿಗಳು ಕೂಡ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಸೆಲೆಬ್ರಿಟಿಗಳು ಸಹ ಬೆಡ್ ಸಿಗದೇ ಪರದಾಡುತ್ತಿದ್ದಾರೆ.
ಇದೀಗ ಸ್ಯಾಂಡಲ್ ವುಡ್ ನಟಿ ಶ್ರುತಿ ಹರಿಹರನ್ ಸಹ ಇದೇ ಪರದಾಡಿದ್ದಾರೆ. ಹೌದು ಶ್ರುತಿ ಕೊವಿಡ್ ಸೋಂಕಿತ ಸ್ನೇಹಿತರಿಗಾಗಿ ಬೆಡ್ ಕೊಡಿಸಲು ಪರದಾಡಿದ್ದಾರೆ. ಸತತ 13 ಗಂಟೆಗಳ ಕಾಲ ಕಷ್ಟಪಟ್ಟಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಶ್ರುತಿ, ‘ಯಾರಿಗಾಗಿ ಅವರು ಬೆಡ್ ವ್ಯವಸ್ಥೆ ಮಾಡಲು ಕಷ್ಟಪಡುತ್ತಿದ್ದರೋ ಆ ವ್ಯಕ್ತಿ ನಿಧನರಾಗಿದ್ದಾರೆ. ಸೂಕ್ತ ಸಮಯಕ್ಕೆ ಐಸಿಯು ಸಿಗದ ಕಾರಣ ಅವರು ಸಾವನಪ್ಪಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ.
ಸುಖ ಸಂಸಾರಕ್ಕೆ ಪಂಚಸೂತ್ರ ಕೊಟ್ಟ ಸನ್ನಿ ಲಿಯೋನ್








