ಬಾಯ್ ಫ್ರೆಂಡ್ ಗೆ ತಾನೇ ಮೊದಲು ಪ್ರಪೋಸ್ ಮಾಡಿದ್ದು ಎಂದ ಶ್ರುತಿ ಹಾಸನ್
ಚೆನ್ನೈ : ಕಾಲಿವುಡ್ ನಟ ಕಮಲ್ ಹಾಸನ್ ಪುತ್ರಿ , ಹಾಗೂ ಸೌತ್ ಇಂಡಿಯಾದ ಖ್ಯಾತ ನಟಿ ಶ್ರುತಿ ಹಾಸನ್ ಲವ್ ಅಲ್ಲಿರೋ ವಿಚಾರ ಎಲ್ರಿಗೂ ಗೊತ್ತಿರೋದೆ.. ಬೇರೆ ನಟಿಯರಂತೆ ಸೀಕ್ರೆಟ್ ಉಳಿಸಿಕೊಳ್ಳೋದೇ ಬಾಯ್ ಫ್ರೆಂಡ್ ಜೊತೆಗೆ ಬೋಲ್ಡ್ ಫೋಟೋಗಳನ್ನ ಹಂಚಿಕೊಳ್ತಾ ಇರುತ್ತಾರೆ.. ಅಂತೆಯೇ ಕೆಲವು ತಿಂಗಳ ಹಿಂದೆಯಷ್ಟೇ ತಮ್ಮ ಬಾಯ್ ಫ್ರೆಂಡ್ ಸಂತನುಗೆ ಸಾರ್ವಜನಿಕ ಸ್ಥಳದಲ್ಲಿ ಕಿಸ್ ಮಾಡಿದ ಫೋಟೋ ಒಂದನ್ನು ಹರಿಬಟ್ಟಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ನೆಟ್ಟಿಗರು ನಾನಾ ಕಮೆಂಟ್ ಗಳನ್ನ ಮಾಡಿದ್ದರು.. ಈಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೊ ಒಂದನ್ನು ಹರಿಬಿಟ್ಟಿದ್ಧಾರೆ..
ಈ ವಿಡಿಯೋ ಮೂಲಕ ಸಂತನು ಅಥವ ಶ್ರುತಿ ಇಬ್ರಲ್ಲಿ ಮೊದಲು ಪ್ರೇಮ ನಿವೇದನೆ ಮಾಡಿದ್ದವರು ಯಾರೆಂಬ ಅಭಿಮಾನಿಗಳ ಕ್ಯೂರಿಯಾಸಿಟಿಗೆ ಬ್ರೇಕ್ ಹಾಕಿದ್ದಾರೆ.. ಅಂದ್ಹಾಗೆ ಬಾಯ್ ಫ್ರೆಂಡ್ ಸಂತನುಗೆ ಮೊದಲು ಪ್ರಪೋಸ್ ಮಾಡಿದ್ದೇ ಶ್ರುತಿ ಹಾಸನ್ ಅವರಂತೆ.. ಈ ವಿಚಾರವನ್ನ ಅವರೇ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.. ಇನ್ಸ್ಟಾಗ್ರಾಮ್ನಲ್ಲಿ ಕೇಳಲಾದ ಕೆಲವೊಂದು ಕಪಲ್ಸ್ ಪ್ರಶ್ನೆಗಳಿಗೆ ಶ್ರುತಿ ಹಾಸನ್ ಹಾಗೂ ಸಂತನು ಉತ್ತರಿಸಿದ್ದಾರೆ. ಈ ವೇಳೆ ನಿಮ್ಮಲ್ಲಿ ಮೊದಲು ಯಾರು ಪ್ರಪೋಸ್ ಮಾಡಿದ್ದು ಎಂಬ ಪ್ರಶ್ನೆಗೆ ಶೃತಿ ಹಾಸನ್ ನಾನೇ ಎಂದು ಹೇಳಿದ್ದಾರೆ. ನಿಮ್ಮಿಬ್ಬರಲ್ಲಿ ಹೆಚ್ಚಾಗಿ ಯಾರು ಪ್ರೊಟೆಕ್ಟ್ ಮಾಡುತ್ತಾರೆ ಎಂಬ ಪ್ರಶ್ನೆಗೆ ಇಬ್ಬರು ಒಬ್ಬರನ್ನೊಬ್ಬರು ತೋರಿಸಿದ್ದಾರೆ.
ಶೃತಿ ಹಾಸನ್ ಹಾಗೂ ಸಂತನು ಹಜಾರಿಕಾ ಒಂದೆರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ಸಮಯದಲ್ಲಿ ಬಾಯ್ಫ್ರೆಂಡ್ ಜೊತೆ ತುಂಬ ಆಪ್ತವಾಗಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು. ಸದ್ಯ ಶೃತಿ ಹಾಸನ್ ಈ ಫನ್ನಿ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿಕೊಳ್ಳುವ ಮೂಲಕ ಸಾರ್ವಜನಿಕವಾಗಿ ಸಂತನು ಹಾಗೂ ತಮ್ಮ ಮಧ್ಯೆ ಇರುವ ಸಂಬಂಧವನ್ನು ಬಹಿರಂಗಪಡಿಸಿದ್ದಾರೆ.