ಮದುವೆಯ ಹೈಲೇಟ್ ವಿಡಿಯೋ ಶೇರ್ ಮಾಡಿದ ಶುಭಾ ಪುಂಜಾ
1 min read
ಮದುವೆಯ ಹೈಲೇಟ್ ವಿಡಿಯೋ ಶೇರ್ ಮಾಡಿದ ಶುಭಾ ಪುಂಜಾ
2021ರ ಡಿಸೆಂಬರ್ ನಲ್ಲಿ ತನ್ನ ಬಹುಕಾಲದ ಗೆಳೆಯ ಸುಮಂತ್ ಮಹಾಬಲ ಜೊತೆಗೆ ಸ್ಯಾಂಡಲ್ ವುಡ್ ನಟಿ , ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ಶುಭಾ ಪುಂಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ತಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ 800 ವರ್ಷ ಪರಂಪರೆಯಿರುವ ತಮ್ಮ ಅಜ್ಜಿಯ ಮನೆಯಲ್ಲಿ ಕುಟುಂಬದವರುಆತ್ಮೀಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.. ಬಳಿಕ ತಮ್ಮ ಮದುವೆಯ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು..
ಇದೀಗ ಶುಭಾ ಪೂಂಜಾ ತಮ್ಮ ಮದುವೆಯ ಹೈಲೈಟ್ ವೀಡಿಯೊವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಅದ್ಭುತ ಕ್ಷಣಗಳು ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಅಭಿಮಾನಿಗಳು ಕಮೆಂಟ್ ಗಳನ್ನ ಮಾಡ್ತಾ ಶುಭ ಹಾರೈಸುತ್ತಿದ್ದಾರೆ..
2004 ರಲ್ಲಿ ಮಚ್ಚಿ ತಮಿಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಶುಭಾ ಪೂಂಜಾ ಜಾಕ್ಪಾಟ್ ಕನ್ನಡ ಚಿತ್ರದ ಮೂಲಕ ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಟ್ಟಿದ್ದರು.
ಮೊಗ್ಗಿನ ಮನಸು, ಚಂಡ, ತಾಕತ್ , ಸ್ಲಂ ಬಾಲಾ, ಕಂಠೀರವ, ನಂತಹ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ರು.. ನಂತರ ಬೇರೆ ಬೇರೆ ಸಿನಿಮಾಗಳಲ್ಲಿ ನಟಿಸಿದ್ರೂ ಅಷ್ಟಾಗಿ ಆ ಸಿನಿಮಾಗಳು ಹಿಟ್ ಆಗದೇ ಹೋದ್ರೂ ಅವರು ಹೆಚ್ಚು ಖ್ಯಾತಿ ಗಳಿಸಿದ್ದು , ಬಿಗ್ ಬಾಸ್ ಮೂಲಕವೇ.. ಬಿಗ್ ಬಾಸ್ ನ ಕ್ಯೂಟ್ ಸ್ಪರ್ಧಿಯಾಗಿಯೇ ಜನರ ಮೆಚ್ಚುಗೆ ಪಡೆದವರು ಶುಭಾ..