Shubman Gill : ರೋಹಿತ್ ಶರ್ಮಾ ದಾಖಲೆ ಮುರಿದ ಗಿಲ್
ಜಿಂಬಾಬ್ವೆ ಪ್ರವಾಸದಲ್ಲಿ ಟೀಂ ಇಂಡಿಯಾದ ಯುವ ಬ್ಯಾಟರ್ ಶುಭ್ ಮನ್ ಗಿಲ್ ಅಬ್ಬರಿಸಿ ಬೊಬ್ಬರಿದ್ದಾರೆ.
ಮೊದಲ ಮ್ಯಾಚ್ ನಲ್ಲಿ ಆರಂಭಿಕರಾಗಿ ಬಂದ ಗಿಲ್ 82 ರನ್, ಎರಡನೇ ಪಂದ್ಯದಲ್ಲಿ 34 ರನ್, ಅಂತಿಮ ಪಂದ್ಯದಲ್ಲಿ 130 ರನ್ ಗಳಿಸಿ ಮಿಂಚಿದ್ದಾರೆ.
ಮೂರನೇ ಪಂದ್ಯದಲ್ಲಿ ವಿಶ್ವರೂಪ ಪ್ರದರ್ಶಿಸಿದ ಶುಭ್ ಮನ್ ಗಿಲ್,ಚೊಚ್ಚಲ ಸೆಂಚೂರಿ ಸಿಡಿಸಿ ತಮ್ಮ ಸಾಮರ್ಥ್ಯ ಸಾಭೀತು ಮಾಡಿದ್ದಾರೆ.
ಈ ಪಂದ್ಯದಲ್ಲಿ 97 ಎಸೆತಗಳಲ್ಲಿ 130 ರನ್ ಗಳಿಸಿದ್ದಾರೆ. ಇದರೊಂದಿಗೆ ಟೀಂ ಇಂಡಿಯಾದ ದಿಗ್ಗಜ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಬ್ರೇಕ್ ಮಾಡಿ ಹೊಸ ದಾಖಲೆಯನ್ನು ಬರೆದಿದ್ದಾರೆ.
![shubman-gill-breaks-rohit-sharma-record saaksha tv](http://saakshatv.com/wp-content/uploads/2020/12/gilll-min-300x238.jpg)
ಮೂರನೇ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಸಣ್ಣ ವಯಸ್ಸಿನಲ್ಲೇ ಜಿಂಬಾಬ್ವೆ ನೆಲದಲ್ಲಿ ಈ ಸಾಧನೆ ಮಾಡಿದ ಬ್ಯಾಟರ್ ಆಗಿದ್ದಾರೆ.
ಗಿಲ್ 22 ವರ್ಷ 348 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದಾರೆ. ಇದರೊಂದಿಗೆ ರೋಹಿತ್ ಶರ್ಮಾ ದಾಖಲೆ ಬ್ರೇಕ್ ಮಾಡಿದ್ದಾರೆ. ಹಿಟ್ ಮ್ಯಾನ್ 23 ವರ್ಷ 28 ದಿನ ವಯಸ್ಸಿನಲ್ಲಿ ಜಿಂಬಾಬ್ವೆ ಮೇಲೆ ಸಂಚೂರಿ ಸಿಡಿಸಿದ್ದರು.
ಅದೇ ರೀತಿ ವಿದೇಶದಲ್ಲಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಸಣ್ಣ ವಯಸ್ಸಿನಲ್ಲಿ ಸೆಂಚೂರಿ ಸಿಡಿಸಿದ ಕ್ರಿಕೆಟ್ ಗಳ ಪಟ್ಟಿಯಲ್ಲಿ ಗಿಲ್ ಮೂರನೇ ಸ್ಥಾನದಲ್ಲಿದ್ದಾರೆ.
ಯುವರಾಜ್ ಸಿಂಗ್ ( 22 ವರ್ಷ 41 ದಿನ ), ವಿರಾಟ್ ಕೊಹ್ಲಿ (22 ವರ್ಷ 315 ದಿನ ) ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು. ಇದೀಗ ಗಿಲ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.