Shubman Gill: ಸೆಂಚೂರಿ ಮಿಸ್ ಆದ್ರೂ ದಿಗ್ಗಜರ ಸಾಲಿಗೆ ಗಿಲ್
ಕೆರಿಬಿಯನ್ ನೆಲದಲ್ಲಿ ಟೀಂ ಇಂಡಿಯಾ ಹೊಸ ಚರಿತ್ರೆಯನ್ನ ಸೃಷ್ಠಿಸಿದೆ. ಬುಧವಾರ ನಡೆದ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ತಂಡವನ್ನು 119 ರನ್ ಗಳ ಭಾರಿ ಅಂತರದಿಂದ ಸೋಲಿಸಿದೆ. ಇದರೊಂದಿಗೆ ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಸಾಧಿಸಿದೆ.
ಯುವ ಬ್ಯಾಟರ್ ಶುಭ್ ಮನ್ ಗಿಲ್ ಸೆಂಚೂರಿಗೆ ಇನ್ನೆರಡು ರನ್ ಗಳ ಅಂತರದಲ್ಲಿ ಮಳೆಯಿಂದ ಭಾರತದ ಇನ್ನಿಂಗ್ಸ್ ಕೊನೆಗೊಂಡಿತ್ತು. ಹೀಗಾಗಿ ಅವರು ಚೊಚ್ಚಲ ಶತಕವನ್ನು ಮಿಸ್ ಮಾಡಿಕೊಂಡರು. ಆದ್ರೂ ಅವರು ದಿಜ್ಜಗ ಕ್ರಿಕೆಟಿಗರ ಸಾಲಿಗೆ ಸೇರಿದ್ದಾರೆ.
ಕೇವಲ ಇನ್ನೊಂದು ಓವರ್ ಆಡಿದ್ದರೂ ಅಥವಾ ಮ್ಯಾಚ್ ಗೆ ಮಳೆ ಅಡ್ಡಿಯಾಗದೇ ಇದ್ದಿದ್ದರೂ ಗಿಲ್ ಸೆಂಚೂರಿ ಸಾಧಿಸುತ್ತಿದ್ದರು. ಸೆಂಚೂರಿ ಮಿಸ್ ಮಾಡಿಕೊಂಡ ಬಗ್ಗೆ ಗಿಲ್ ಮ್ಯಾಚ್ ಬಳಿಕ ಬೇಸರ ಹೊರಹಾಕಿದ್ರು.

ಒಂದು ಓವರ್ ಸಿಕ್ಕಿದ್ದರೂ ನಾನು ಸೆಂಚೂರಿ ಸಾಧಿಸುತ್ತಿದೆ. ಆದ್ರೆ 98 ರನ್ ಗಳಿಗೆ ನನ್ನ ಇನ್ನಿಂಗ್ಸ್ ಕೊನೆಯಾಗಬೇಕು ಅಂತಾ ದೇವರು ಬರೆದಿಟ್ಟಿದ್ದರು. ಆದ್ರೂ ಪರವಾಗಿಲ್ಲ ನನ್ನ ಇನ್ನಿಂಗ್ಸ್ ನೊಂದಿಗೆ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಖಂಡಿತವಾಗಿಯೂ ಈ ಇನ್ನಿಂಗ್ಸ್ ನನ್ನ ಕೆರಿಯರ್ ದಿ ಬೆಸ್ಟ್ ಅನ್ನೋದ್ರಲ್ಲಿ ಯಾವುದೇ ಸಂಶಯವಿಲ್ಲ ಎಂದು ಶುಭ್ ಮನ್ ಗಿಲ್ ಹೇಳಿದ್ದಾರೆ.
ಈ ಪಂದ್ಯದಲ್ಲಿ ಗಿಲ್ ಸೆಂಚೂರಿ ಮಿಸ್ ಮಾಡಿಕೊಂಡರೂ ಸಚಿನ್, ಸೆಹ್ವಾಗ್, ಸುನೀಲ್ ಗವಾಸ್ಕರ್ ರಂತಹ ಟೀಂ ಇಂಡಿಯಾ ದಿಗ್ಗಜರ ಸಾಲಿಗೆ ಸೇರಿದ್ದಾರೆ. ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್ ನಲ್ಲಿ 90 ಕ್ಕೂ ಹೆಚ್ಚು ರನ್ ಗಳಿಗೆ ನಾಟೌಟ್ ಆದ ಆಟಗಾರರ ಪಟ್ಟಿಗೆ ಸೇರಿದ್ದಾರೆ.








