ಚೆನ್ನೈ : ಜೂಜು ಅಡ್ಡೆ ನಡೆಸುತ್ತಿದ್ದ ಆರೋಪದಲ್ಲಿ ಬಹುಭಾಷಾ ನಟ ಶ್ಯಾಮ್ ಅವರನ್ನು ಚೆನ್ನೈ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ. ಶ್ಯಾಮ್ ಅವರು ತಮ್ಮ ಅಪಾಟ್ ಮೆಂಟ್ ನಲ್ಲಿ ಜೂಜಾಟ ನಡೆಸುತ್ತಿದ್ದರು ಎಂಬ ಆರೋಪ ಕೇಳಿಬಂದ ಹಿನ್ನೆಲೆ ನುಂಗಂಬಾಕಂನಲ್ಲಿರುವ ಶ್ಯಾಮ್ ಅವರ ಅಪಾರ್ಟೆಮೆಂಟ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಜೂಜಾಟಕ್ಕೆ ಬಳಸುತ್ತಿದ್ದ ವಸ್ತುಗಳು, ಟೋಕನ್ ಗಳು ಹಾಗೂ ಹಣವನ್ನು ತನಿಖಾಗಾರರು ಜಪ್ತಿ ಮಾಡಿದ್ದಾರೆ.
ದಾಳಿ ವೇಳೆ ಶ್ಯಾಮ್ ಸೇರಿದಂತೆ 11 ಮಂದಿಯನ್ನು ಬಂಧಿಸಲಾಗಿದ್ದು, ಇದರಲ್ಲಿ ಪ್ರಖ್ಯಾತ ತಮಿಳು ನಟ-ನಟಿಯರು ಸಹ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಜೂಜಾಟದಲ್ಲಿ ಬಹುದೊಡ್ಡ ಮೊತ್ತವನ್ನು ಕಳೆದುಕೊಂಡ ಪ್ರಖ್ಯಾತ ನಟನೊಬ್ಬ ನೀಡಿದ ಸುಳಿವಿನಿಂದ ಜೂಜು ಅಡ್ಡೆಯ ಮೇಲೆ ದಾಳಿ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.








