ಹೆಚ್ ಡಿ ಕುಮಾರಸ್ವಾಮಿ ಅವರ ಕುಂಟುಂಬ ಹಿಂದು ವಿರೋಧಿ : ಶ್ರೀ ಸಿದ್ದಲಿಂಗ ಸ್ವಾಮೀಜಿ
ಕಲಬುರಗಿ : ಹೆಚ್ ಡಿ ಕುಮಾರಸ್ವಾಮಿ ಅವರ ಕುಂಟುಂಬ ಹಿಂದು ವಿರೋಧಿಯಾಗಿದ್ದು, ನಿಮ್ಮ ಮನೆಯ ದೇವರ ಕೋಣೆಗೆ ಎಷ್ಟು ಜನ ದಲಿತರು, ಹಿಂದುಳಿದವರನ್ನು ಬಿಟ್ಟುಕೊಂಡಿದ್ದಿರಿ ಎಂದು ಆಂದೋಲ ಮಠದ ಸಿದ್ದಲಿಂಗ ಸ್ವಾಮೀಜಿಗಳು ಪ್ರಶ್ನಿಸಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ ಅವರು ಹಿಂದು ಸಂಘಟನೆ ಮತ್ತು ಸರ್ಕಾರವನ್ನು ದೂಷಿಸುವ ಬರದಲ್ಲಿ ಮಠ-ಮಂದಿರಗಳನ್ನು ಎಳೆದು ತಂದಿದ್ದಾರೆ. ಕುಮಾರಸ್ವಾಮಿ ಅವರು ಸವರ್ಣೀಯರ ವಿರುದ್ಧ ದಲಿತರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೀವು ಸಿಎಂ ಆಗಿದ್ದಾಗ ಮುಜರಾಯಿ ದೇವಸ್ಥಾನಗಳಲ್ಲಿ ಎಷ್ಟು ದಲಿತರಿಗೆ ಗರ್ಭಗುಡಿಗೆ ಹೋಗಲು ಅವಕಾಶ ಮಾಡಿಕೊಟ್ಟಿದ್ದೀರಾ? ನಿಮ್ಮ ಮನೆಗಳನ್ನು ದಲಿತರು, ಹಿಂದುಳಿದ ಜನರಿಂದ ಕಟ್ಟಿಸಿಕೊಂಡಿದ್ದೀರಿ ? ಎಂದು ಹಿಂದುಳಿದವರಿಗೆ ದೇವಸ್ಥಾನಗಳ ಗರ್ಭಗುಡಿಗೆ ಪ್ರವೇಶ ಕೊಟ್ಟಿದ್ದೀರಾ ಎಂಬ ಕುಮಾರಸ್ವಾಮಿಯವರ ಪ್ರಶ್ನೆಗೆ ಸ್ವಾಮಿಜಿ ಕಿಡಿಕಾರಿದರು.
ಸಿದ್ದರಾಮಯ್ಯನವರು ಸ್ವಾಮಿಗಳ ಪೇಠದ ಬಗ್ಗೆ ಮಾತನಾಡಿದಾಗ ಅದನ್ನು ಖಂಡಿಸಿದ್ದೀರಾ. ಆಗ ಸಿದ್ದರಾಮಯ್ಯ ಕನ್ನಡ ಪಂಡಿತ ಅಂತಾ ಅಪಹಾಸ್ಯ ಮಾಡಿದ್ದಿರಿ. ಆದರೆ ಈಗ ನೀವೇ ಮಠಗಳ ಬಗ್ಗೆ ಮಾತನಾಡುತ್ತಿದ್ದೀರಿ. ನೀವು ಉರ್ದು ಪಂಡಿತರಾ? ನೀವು ಯಾವ ಪಂಡಿತರು. ಈ ರೀತಿ ಅನಾವಶ್ಯಕವಾಗಿ ಮಾತನಾಡಿಯೇ ಮಂಡ್ಯದಲ್ಲಿ ನಿಮ್ಮ ಪುತ್ರನ ಸೋಲಿಗೆ ನೀವು ಕಾರಣರಾಗಿದ್ದೀರಿ ಎಂದು ತಿರುಗೇಟು ನೀಡಿದ್ದಾರೆ.