Hijab Controvercy : ಕೋವಿಡ್ ಜೊತೆಗೆ ಹಿಜಾಬ್ ವಿವಾದ ಬಂದು ಮತ್ತೆ ಶಿಕ್ಷಣಕ್ಕೆ ಅಡ್ಡಿಯಾಗಿದೆ : ಸಿದ್ಧಲಿಂಗ ಸ್ವಾಮೀಜಿಗಳು
ತುಮಕೂರು : ಇವತ್ತಿನ ಕ್ಷುಲ್ಲಕ ವಿಚಾರಗಳನ್ನು ಮುಂದುವರೆಸಬಾರದು,ಇದಕ್ಕೆ ನಾವು ಅಂತ್ಯ ಹಾಡಬೇಕು.. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ,ಇದು ಹೀಗೆ ಮುಂದುವರೆಯಬೇಕು ಎಂದು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಗಳು ಹೇಳಿದ್ದಾರೆ..
ಇನ್ನೂ ಹಿಜಾಬ್.. ಇದೊಂದು ಕ್ಷುಲ್ಲಕ ವಿಚಾರ.. ಕೋವಿಡ್ ಬಂದು ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿದೆ.. ಅದರ ಜೊತೆ ಹಿಜಾಬ್ ಬಂದು ಮತ್ತೆ ಶಿಕ್ಷಣಕ್ಕೆ ಅಡ್ಡಿಯಾಗಿದೆ ಎಂದು ಹೇಳಿದ್ದಾರೆ..
ಇದೇ ವೇಳೆ ಕೋರ್ಟ್ ತೀರ್ಪು ಏನೇ ಬಂದರೂ ಸಮಾನವಾಗಿ ಸ್ವೀಕರಿಸಬೇಕು.. ಧಾರ್ಮಿಕವಾಗಿ ಹುಟ್ಟಿಕೊಂಡ ಈ ವಿವಾದ ರಾಜಕೀಯವಾಗಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ.. ಇದಕ್ಕೆ ರಾಜಕೀಯ ಪ್ರವೇಶ ಮಾಡಬಾರದು.. ರಾಜಕೀಯ ಪ್ರವೇಶ ಪಡೆಯದೇ ಇದ್ದರೆ ಅದಷ್ಟಕ್ಕೆ ಹಾಗೆಯೇ ಸುಮ್ಮನಾಗುತ್ತದೆ..
ಯಾರೇ ಧಾರ್ಮಿಕ ಮುಖಂಡರು ಹಿಜಾಬ್ ವಿಷಯಕ್ಕೆ ಪ್ರೋತ್ಸಾಹ ಕೊಡಬಾರದು.. ಶಾಲೆಯ ನಿಯಮ ಎಲ್ಲರೂ ಪಾಲನೆ ಮಾಡಬೇಕು.. ಸಮವಸ್ತ್ರ ಹಿಂದಿನಿಂದಲೂ ನಡೆದುಕೊಂಡು ಬಂದಿದೆ,ಇದು ಹೊಸದಲ್ಲ.. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತೀಯವಾಗಿ ತೆಗೆದುಕೊಳ್ಳಬಾರದು ಎಂದಿದ್ದಾರೆ..