ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತಾಗಿದೆ ಸಿದ್ದರಾಮಯ್ಯ ಪರಿಸ್ಥಿತಿ Siddaramaiah saaksha tv
ಬೆಂಗಳೂರು : ಮಾನ್ಯ ಸಿದ್ದರಾಮಯ್ಯನವರೇ, ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತಾಗಿದೆ ನಿಮ್ಮ ಪರಿಸ್ಥಿತಿ ಎಂದು ರಾಜ್ಯ ಬಿಜೆಪಿ ಕುಟುಕಿದೆ.
ಸಿದ್ದರಾಮಯ್ಯ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಕಾನೂನು ಆಯೋಗದ ಶಿಫಾರಸಿನ ಮೇರೆಗೆ ತಯಾರಾದ ಮತಾಂತರ ನಿಷೇಧ ವಿಧೇಯಕಕ್ಕೆ ನೀವೇ ಸಹಿ ಹಾಕಿ ಈಗ ಇಲ್ಲವೇ ಇಲ್ಲ ಎಂದರೆ ಹೇಗೆ? ಸತ್ಯ ಯಾವಾಗಲೂ ಕಹಿ ಅಲ್ಲವೇ ಎಂದಿದೆ.
ಸಿದ್ದರಾಮಯ್ಯನವರೇ #AntiConversionBill ವಿರೋಧಿಸುವುದಕ್ಕೆ ಮುನ್ನ ಒಂದು ಕೆಲಸ ಮಾಡಿ.
"ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಮತಾಂತರ ನಿಷೇಧ ಕರಡು ಮಸೂದೆಗೆ ಸಹಿ ಹಾಕಿದ್ದೆ, ಈಗ ರಾಜಕೀಯ ಕಾರಣಕ್ಕಾಗಿ ವಿರೋಧಿಸುತ್ತೇನೆ" ಎಂದು ಬಹಿರಂಗವಾಗಿ ಹೇಳಿಬಿಡಿ.
ಆಗ ಇಲ್ಲದ ವಿರೋಧ, ಈಗೇಕೆ!?
— BJP Karnataka (@BJP4Karnataka) December 23, 2021
ಸಿದ್ದರಾಮಯ್ಯನವರೇ #AntiConversionBill ವಿರೋಧಿಸುವುದಕ್ಕೆ ಮುನ್ನ ಒಂದು ಕೆಲಸ ಮಾಡಿ. “ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಮತಾಂತರ ನಿಷೇಧ ಕರಡು ಮಸೂದೆಗೆ ಸಹಿ ಹಾಕಿದ್ದೆ, ಈಗ ರಾಜಕೀಯ ಕಾರಣಕ್ಕಾಗಿ ವಿರೋಧಿಸುತ್ತೇನೆ” ಎಂದು ಬಹಿರಂಗವಾಗಿ ಹೇಳಿಬಿಡಿ.
ಮಾನ್ಯ ಸಿದ್ದರಾಮಯ್ಯ ನೀವು ಮುಖ್ಯಮಂತ್ರಿಯಾಗಿದ್ದಾಗಲೇ #AntiConversionBill ಕರಡು ಪ್ರತಿಗೆ ಸಹಿ ಹಾಕಿದ್ದೀರಿ. ಈಗ ಅಧಿನಾಯಕಿ ಆಂಟೋನಿಯೋ ಮೈನೋ ಅವಕೃಪೆಗೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣಕ್ಕಾಗಿ ವಿರೋಧಿಸುತ್ತಿದ್ದೀರಾ ಎಂದು ಪ್ರಶ್ನಿಸಿದೆ.








