ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹೆಚ್.ಡಿ ಕುಮಾರಸ್ವಾಮಿ ನಡುವಿನ ಜಟಾಪಟಿ ಮತ್ತೆ ತಾರಕ್ಕೇರಿದೆ. ಚಾಮುಂಡೇಶ್ವರಿ ಕ್ಷೇತ್ರದ ನನ್ನ ಸೋಲಿಗೆ ಬಿಜೆಪಿ ಜತೆ ಜೆಡಿಎಸ್ ಒಳ ಒಪ್ಪಂದ ಕಾರಣ ಎಂದು ಬಾಂಬ್ ಸಿಡಿಸಿದ್ದ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಮತ್ತೊಂದು ಪ್ರಹಾರ ನಡೆಸಿದ್ದಾರೆ.
ಸಿದ್ದರಾಮಯ್ಯ ಎಲ್ಲಿದ್ದರು ಅಂತಾ ಗೊತ್ತಾ..ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಮಟ್ಟಕ್ಕೆ ಬೆಳೆಯಲು ನನ್ನ ಶ್ರಮವಿದೆ ಎಂದು ಹೇಳುವ ಮೂಲಕ ಭರ್ಜರಿ ಡಿಚ್ಚಿ ಕೊಟ್ಟಿದ್ದಾರೆ.
ಬೆಂಗಳೂರಿನ ಪದ್ಮನಾಭನಗರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, 2004ರಲ್ಲಿ ಸಿದ್ದರಾಮಯ್ಯ ಡಿಸಿಎಂ ಆಗಲು ನನ್ನ ಪಾಲು ಇದೆ. ಆದರೆ, ನಾನು ಸಿಎಂ ಆಗಲು ನಿಮ್ಮ ಪಾಲು ಇಲ್ಲ ಎಂದು ಹೇಳುತ್ತಿದ್ದೇನೆ. ಸಿದ್ದರಾಮಯ್ಯ ಡಿಸಿಎಂ ಆಗಲು ಆರ್ಥಿಕ ಶಕ್ತಿ ಕೊಟ್ಟವನು ನಾನು. ಆದರೆ ಸಿದ್ದರಾಮಯ್ಯ ಅವರಿಂದ ನನಗೆ ಯಾವ ಲಾಭ ಆಗಿಲ್ಲ. ಆದರೆ, ಸಿದ್ದರಾಮಯ್ಯ ಪದೇ ಪದೆ ಒಳಒಪ್ಪಂದ, ಜೆಡಿಎಸ್ ಬಿಜೆಪಿಯ ಬಿ ಟೀಂ ಎನ್ನುವ ಮೂಲಕ ಕ್ಷುಲ್ಲಕ ಹೇಳಿಕೆ ನೀಡುತ್ತಿದ್ದಾರೆ. ಇಂತಹ ಹೇಳಿಕೆ ನೀಡಿ ಗೌರವ ಕಳೆದುಕೊಳ್ಳಬೇಡಿ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಜೆಡಿಎಸ್ ಪಕ್ಷವು ಯಾವುದೇ ಪಕ್ಷದ ಜತೆಗೂ ವಿಲೀನ ಮಾಡಿಕೊಳ್ಳುವ ಮಾತೇ ಇಲ್ಲ. 2023ಕ್ಕೆ ಜೆಡಿಎಸ್ ಸ್ವತಂತ್ರ ಸರ್ಕಾರ ತರುವುದು ನನ್ನ ಗುರಿಯಾಗಿದೆ. ಯಾವುದೇ ಪಕ್ಷದ ಜತೆ ವಿಲೀನವೂ ಇಲ್ಲ, ಹೊಂದಾಣಿಕೆ ಬಗ್ಗೆ ಯಾವ ಪಕ್ಷಗಳಿಂದಲೂ ಪ್ರಸ್ತಾವನೆ ಬಂದಿಲ್ಲ. ಅಭಿವೃದ್ಧಿ ವಿಷಯಗಳಿಗೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರಕ್ಕೆ ವಿಷಯಾಧಾರಿತ ಬೆಂಬಲ ಅಷ್ಟೇ. ಆದರೆ, ಜನ ವಿರೋಧಿ ನಿರ್ಧಾರಗಳಿಗೆ ಜೆಡಿಎಸ್ ಬೆಂಬಲ್ಲ ನೀಡುವುದಿಲ್ಲ.
ಆದರೆ, ಮೈತ್ರಿ ಸರ್ಕಾರದಲ್ಲಿ ಸಚಿವರಾಗಿ ಆರ್ಥಿಕ ಶಕ್ತಿ ಪಡೆದುಕೊಂಡು, ಜೆಡಿಎಸ್‍ನಿಂದ ಒಂದು ಕಾಲು ಹೊರಗೆ ಇಟ್ಟವರು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಪರೋಕ್ಷವಾಗಿ ಜಿ.ಟಿ ದೇವೇಗೌಡ, ಗುಬ್ಬಿ ಶಾಸಕ ಶ್ರೀನಿವಾಸ್ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel