ಸಿದ್ದರಾಮಯ್ಯ ಯಾವತ್ತೂ ಹುಲಿನೇ : ಆರ್.ಧ್ರುವನಾರಾಯಣ
ಚಾಮರಾಜನಗರ : ಸಿದ್ದರಾಮಯ್ಯ ಯಾವತ್ತೂ ಹುಲಿನೇ, ಇಂತಹ ಇಲಿಗಳಿಂದ ನಾವು ಏನು ನಿರೀಕ್ಷೆ ಮಾಡಲ್ಲ ಅಂತಾ ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ ಅವರು ಹುಲಿಯಂತೆ ಅಬ್ಬರಿಸುತ್ತಿದ್ದರು. ಆದ್ರೆ ಇಂದು ಮಾಜಿ ಸಿಎಂ ಕುಮಾರಸ್ವಾಮಿ ಸಿದ್ದರಾಮಯ್ಯರನ್ನ ಬೋನಿನಲ್ಲಿ ಕೂಡಿ ಹಾಕಿದ್ದಾರೆ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಚಾಮರಾಜನಗರದಲ್ಲಿ ಆರ್.ಧ್ರುವನಾರಾಯಣ ಅವರು ಟಾಂಗ್ ನೀಡಿದ್ದಾರೆ.
ನಗರದಲ್ಲಿ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಧ್ರುವನಾರಾಯಣ್, ಮಾಜಿ ಸಿಎಂ ಸಿದ್ದರಾಮಯ್ಯ ಯಾವತ್ತೂ ಹುಲಿನೇ. ಬಿಜೆಪಿಯವರು ಇತಿಹಾಸದಲ್ಲೇ ಮೊದಲ ಬಾರಿಗೆ ಮೈಸೂರು ಮೇಯರ್ ಆಗುತ್ತೇವೆ ಅಂತಾ ಸಡಗರದಲ್ಲಿ ಇದ್ದರು.
ಆದ್ರೆ ಅವರ ಆಸೆ ಫಲಿಸಲಿಲ್ಲ. ಇದರಿಂದಾಗಿ ಪ್ರತಾಪ್ ಸಿಂಹ ಹತಾಶರಾಗಿ ಈ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಯಾವತ್ತೂ ಹುಲಿನೇ. ಇಲಿಗಳಿಂದ ನಾವು ಏನನ್ನು ನಿರೀಕ್ಷೆ ಮಾಡಲ್ಲ ಎಂದು ಪ್ರತಾಪ್ ಹೇಳಿಕೆಗೆ ಟಾಂಗ್ ನೀಡಿದರು.
ಒಪ್ಪಂದ ಮಾಡಿಕೊಂಡಂತೆ ಜೆಡಿಎಸ್ ನವರು ನಡೆದುಕೊಳ್ಳಲಿಲ್ಲ. ಒಪ್ಪಂದಂತೆ ನಮಗೆ ಈ ಬಾರಿ ಮೇಯರ್ ಪಟ್ಟ ಬಿಟ್ಟುಕೊಡಬೇಕಿತ್ತು. ಸಿದ್ದರಾಮಯ್ಯ ಅವರೇ ನನ್ನನ್ನು ವೀಕ್ಷಕನಾಗಿ ನೇಮಿಸಿದ್ದು, ಸಿದ್ದರಾಮಯ್ಯ ಯಾವತ್ತೂ ನಮ್ಮ ನಾಯಕರೇ ಅವರ ವಿರುದ್ಧ ಪ್ರತಿಭಟನೆ ಮಾಡಿದ್ದು, ಪತ್ರಿಕಾ ಹೇಳಿಕೆ ಕೊಟ್ಟಿದ್ದು ಎರಡೂ ತಪ್ಪು ಅಂತಾ ಧ್ರುವನಾರಾಯಣ ತಿಳಿಸಿದರು.
