ಸಿದ್ದರಾಮಯ್ಯ ಅಂದ್ರೆ ಸುಳ್ಳಿಗೆ ಇನ್ನೊಂದು ಹೆಸರು : ಈಶ್ವರಪ್ಪ
ದಾವಣಗೆರೆ : ಸಿದ್ದರಾಮಯ್ಯ ಅಂದ್ರೆ ಸುಳ್ಳಿಗೆ ಇನ್ನೊಂದು ಹೆಸರು. ಸಿದ್ದರಾಮಯ್ಯನಂತಹ ಸುಳ್ಳುಗಾರನನ್ನು ನನ್ನ ಜೀವನದಲ್ಲಿ ನೋಡಿಲ್ಲ ಎಂದು ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ವೇಳೆ ಸಿದ್ದರಾಮಯ್ಯ ದೆಹಲಿಯಿಂದ ಮಾಹಿತಿ ಬಂದಿದೆ.
ಚುನಾವಣೆ ಬಳಿಕ ಸಿಎಂ ಬದಲಾಗುತ್ತಾರೆ ಅಂತಾ ಹೇಳಿದ್ದರು. ಆದ್ರೆ ಚುನಾವಣೆ ಮುಗಿದು ಎಷ್ಟು ದಿನಗಳು ಕಳೆದವು. ಎಲ್ಲಿ ನಾಯಕತ್ವ ಬದಲಾವಣೆ ಆಯ್ತು ಎಂದು ಈಶ್ವರಪ್ಪ ಪ್ರಶ್ನಿಸಿದರು.
ಇನ್ನು ಸಿದ್ದರಾಮಯ್ಯ ಅಂದ್ರೆ ಸುಳ್ಳಿಗೆ ಇನ್ನೊಂದು ಹೆಸರು. ಸಿದ್ದರಾಮಯ್ಯನಂತಹ ಸುಳ್ಳುಗಾರನನ್ನು ನನ್ನ ಜೀವನದಲ್ಲಿ ನೋಡಿಲ್ಲ.
ಮುಂದಿನ ಮುಖ್ಯಮಂತ್ರಿ ಆಗ್ತೀನಿ ಎಂದು ಸಿದ್ದರಾಮಯ್ಯ ಹಗಲು ಕನಸು ಕಾಣುತ್ತಿದ್ದಾರೆ.
ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಸಿಎಂ ಆಗಬೇಕು ಎಂಬುದು ಹಗಲುಗನಸಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಸಾರಿಗೆ ನೌಕರರ ಪ್ರತಿಭಟನೆ ಬಗ್ಗೆ ಮಾತನಾಡಿದ ಈಶ್ವರಪ್ಪ, ಕೊರೊನಾ ಸಂಕಷ್ಟದಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸುವುದು ಸೂಕ್ತವಲ್ಲ.
ಸಾರಿಗೆ ನೌಕರರ ಬೇಡಿಕೆ ಪೂರೈಕೆ ತುಂಬಾ ಕಷ್ಟವಾಗಿದೆ. ರಾಜ್ಯದ ಬಜೆಟ್ ನಲ್ಲಿ ಶೇ.56ರಷ್ಟು ಸಿಬ್ಬಂದಿಯ ವೇತನಕ್ಕೆ, ಇನ್ನುಳಿದ ಶೇ.44%ರಷ್ಟು ನಿಗಮಗಳಿಗೆ ಹೋಗುತ್ತದೆ.
ಇಂತಹ ಪರಿಸ್ಥಿತಿಯಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನನಾಗಿ ಪರಿಗಣಿಸುವುದು ತುಂಬಾ ಕಷ್ಟ ಎಂದು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
https://www.youtube.com/watch?v=PJXAUYUadFg