Siddaramaiah | ಇದು ದಪ್ಪ ಚರ್ಮದ ಸರ್ಕಾರ
ನನ್ನ ವಿರುದ್ಧ ಪ್ರತಿಭಟನೆಗೆ ಸರ್ಕಾರ ಕುಮ್ಮಕ್ಕು
26 ರಂದು ಎಸ್ ಪಿ ಕಚೇರಿ ಮುತ್ತಿಗೆ
ಇದು ಕೆಟ್ಟ ಮತ್ತು ಭ್ರಷ್ಟ ಸರಕಾರ
ಚಿಕ್ಕಮಗಳೂರಿನಲ್ಲಿ ಸಿದ್ದರಾಮಯ್ಯ ಆಕ್ರೋಶ
ಚಿಕ್ಕಮಗಳೂರು : ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ, ಲೂಟಿ ಹೊಡೆಯಲು ಬಂದಿದ್ದಾರೆ. ಇತಿಹಾಸದಲ್ಲಿ 40 ಸರ್ಕಾರ ಬಂದಿರಲಿಲ್ಲ, ಬ್ಯಾಡ್, ಕಮ್ಯುನಲ್, ಕರ್ಪ್ಟ್ ಸರ್ಕಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಈ ಸರ್ಕಾರ ದಪ್ಪ ಚರ್ಮದ ಸರ್ಕಾರವಾಗಿದೆ. 2018-19ರಲ್ಲಿ ಆದ ಅತಿವೃಷ್ಟಿ ಅನಾಹುತಕ್ಕೆ ಪರಿಹಾರ ನೀಡಿಲ್ಲ. ಕೃಷಿ ಭೂಮಿ ವ್ಯವಸಾಯ ಯೋಗ್ಯವಲ್ಲದಂತಾಗಿದೆ. ಈ ಬಾರಿಯೂ ಮುಂಗಾರು ನಾರ್ಮಲ್ ಗಿಂತ ಹೆಚ್ಚು ಸುರಿದಿದೆ. ರಾಜ್ಯದ 14-15 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ರಾಜ್ಯದಲ್ಲಿ 5 ಲಕ್ಷ 23 ಸಾವಿರ ಹೆಕ್ಟೇರ್ ಬೆಳೆ ಹಾಳಾಗಿದೆ. ಕಾಫಿ, ಅಡಿಕೆ, ಹಾಳಾಗಿದೆ, ಕೊಳೆ ರೋಗ ಬಂದಿದೆ. ನಾವು ಕೊಳೆ ರೋಗಕ್ಕೆ ಪರಿಹಾರ ನೀಡಿದ್ವಿ, ಈ ಸರ್ಕಾರ ಏನೂ ಮಾಡಿಲ್ಲ.
ಸಿಎಂ ದುಡ್ಡು ಬಿಡುಗಡೆ ಮಾಡಿದ್ದೇವೆ ಅಂತ ಹೇಳಿದ್ದಾರೆ. ಚಿಕ್ ನೀಡಿದ್ದಾರೆ, ಕ್ಯಾಶ್ ಆಗಿಲ್ಲ. ಬರ ಪರಿಹಾರ ಕಾಮಗಾರಿ ಕಳಪೆ ಕಾಮಗಾರಿಯಾಗಿದೆ. ಕೊಡಗಿನಲ್ಲಿ 7 ಕೋಟಿಯ ಡಿಸಿ ಕಚೇರಿ ಬಳಿ ಕಟ್ಟಿದ ರಿಟೇನ್ ವಾಲ್ ಬಿದ್ದು ಹೋಗಿದೆ. ನಾನು ಹೋಗ್ತೀನಿ ಅಂತ ನನ್ನ ವಿರುದ್ಧ ಕೂಗಿಸಿದ್ದಾರೆ. ನಮ್ಮ ಕಾರ್ಯಕರ್ತರು ಉತ್ತರ ಕೊಟ್ಟರು. ಬಿಜೆಪಿ ರಾಜ್ಯದಲ್ಲಿ ಹತಾಶರಾಗಿದ್ದಾರೆ. ನಾನು ಹೋಗಿರುವುದು ಅತಿವೃಷ್ಟಿ ವೀಕ್ಷಣೆಗೆ, ಪ್ರತಿಭಟನೆ ಏಕೆ…? ಜನರ ಭಾವನೆ ತಿರುಗಿಸಲು ಈ ರೀತಿ ಮಾಡುತ್ತಿದ್ದಾರೆ.
ಅವರ ಸಿಎಂಗೆ, ಮಿನಿಸ್ಟರ್ ಗೆ ಬಾವುಟ ಹಿಡಿಯಲು ಆಗಲ್ವ. ಇದು ಬಿಜೆಪಿ ಸರ್ಕಾರದ ಹೇಡಿತನ. ಇಡೀ ರಾಜ್ಯ ಇವರದ್ದಾ, ಗೋ ಅಂದ್ರೆ ಎಲ್ಲಿಗೆ ಹೋಗಲಿ. ನಮ್ಮವರ ಹೇಳ್ತಾರೆ, ಗೋ ಬ್ಯಾಕ್ ಸಿಎಂ ಎಂದು. ಸೆಕ್ಯೂರಿಟಿ ನೀಡೋದು ಅವರ ಜವಾಬ್ದಾರಿ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ, ಲೂಟಿ ಹೊಡೆಯಲು ಬಂದಿದ್ದಾರೆ. ಇತಿಹಾಸದಲ್ಲಿ 40 ಸರ್ಕಾರ ಬಂದಿರಲಿಲ್ಲ, ಬ್ಯಾಡ್, ಕಮ್ಯುನಲ್, ಕರ್ಪ್ಟ್ ಸರ್ಕಾರ. ಜನ, ಅಲ್ಪಸಂಖ್ಯಾರರು ನೆಮ್ಮದಿಯಿಂದ ಇದ್ದಾರಾ… ಭಯದಿಂದ ಇದ್ದಾರೆ.
ಕಾರಿಗೆ ಮೊಟ್ಟೆ ಹೊಡೆದ ಪ್ರಕರಣ ಬಗ್ಗೆ ಮಾತನಾಡಿ, ನಿನ್ನೆಯ ಪ್ರಕರಣ ಸ್ಟೇಟ್ ಸ್ಪಾನ್ಸರಡ್ ಪ್ರೊಟೆಸ್ಟ್. 26 ರಂದು ಎಸ್ಪಿ ಕಚೇರಿಯ ಮುಂದೆ ಪ್ರತಿಭಟನೆ ಮಾಡುತ್ತೇವೆ. ಎಸ್ಪಿಗೆ ಯಾವ ರೋಗ ಬಂದಿತ್ತು. ಒಂದು ಕಡೆ ಕಪ್ಪು ಬಟ್ಟೆ ಪ್ರದರ್ಶನ ಮಾಡಿದ್ದ ನಂತ್ರ ಇನ್ನೂ ಮೂರು ಕಡೆ ತಡೆಯಬಹುದಿತ್ತು ಎಂದರು ಕಿಡಿಕಾರಿದರು.