ಭ್ರಷ್ಟರಿಂದ ಭ್ರಷ್ಟರ ರಕ್ಷಣೆ : ಸಿದ್ದರಾಮಯ್ಯ ಕಿಡಿ
ಚಿಕ್ಕಮಗಳೂರು : ಭ್ರಷ್ಟರನ್ನು ಭ್ರಷ್ಟರು ರಕ್ಷಣೆ ಮಾಡುತ್ತಿದ್ದಾರೆ. ಈ ಸಿ.ಟಿ. ರವಿ, ಆ ಈಶ್ವರಪ್ಪನನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿಗರ ವಿರುದ್ಧದ ಚಿಕ್ಕಮಗಳೂರಿನಲ್ಲಿ ಕಿಡಿಕಾರಿದ್ದಾರೆ.
ನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಈಶ್ವರಪ್ಪ ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾದ ಬೆಳಗಾವಿ ಮೂಲದ ಕಂಟ್ರಾಕ್ಟರ್ ಸಂತೋಷ್ ಪಾಟೀಲ್ ಯಾರೆಂದು ನನಗೆ ಗೊತ್ತೇ ಇಲ್ಲ ಎಂದರು.
ಹಾಗಾದರೆ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿದ್ದಲ್ಲ ಯಾರ ಮೇಲೆ ಹಾಕಿದಪ್ಪಾ? ಹೇಗೆ ಹಾಕಿದಪ್ಪಾ ಎಂದು ಈಶ್ವರಪ್ಪ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಇದಲ್ಲದೇ ಸಿ.ಟಿ ರವಿ ಬಗ್ಗೆ ಮಾತನಾಡಿ ಭ್ರಷ್ಟರನ್ನು ಭ್ರಷ್ಟರು ರಕ್ಷಣೆ ಮಾಡುತ್ತಿದ್ದಾರೆ. ಈ ಸಿ.ಟಿ. ರವಿ, ಆ ಈಶ್ವರಪ್ಪನನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. siddaramaiah-questioned-eshwarappa