`ನಾನು ಗೋಮಾಂಸ ತಿಂದಿಲ್ಲ, ತಿನ್ನಬೇಕು ಅನ್ಸಿದ್ರೆ ತಿಂತೀನಿ’
ಮೈಸೂರು : ನಾನು ಈವರೆಗೂ ಗೋಮಾಂಸ ತಿಂದಿಲ್ಲ, ತಿನ್ನಬೇಕು ಅನ್ಸಿದ್ರೆ ತಿಂತೀನಿ. ಅದನ್ನ ಕೇಳೋಕೆ ಇವರ್ಯಾರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಗೋಮಾಂಸ ತಿನ್ನುವ ವಿಚಾರವಾಗಿ ಬಿಜೆಪಿ ನಾಯಕರ ಹೇಳಿಕೆಗಳಿಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಿದ್ದರಾಮ್ಯಯ, ಯಡಿಯೂರಪ್ಪನವರಿಗೆ ನಾನು ಸ್ಪಷ್ಟವಾಗಿ ಹೇಳುತ್ತೇನೆ ನಾನು ಈವರೆಗೆ ಗೋಮಾಂಸ, ಹಂದಿ ಮಾಂಸ ತಿಂದಿಲ್ಲ.
ಆದ್ರೆ ತಿನ್ನಬೇಕು ಅನ್ಸಿದ್ರೆ ತಿಂತಿನಿ. ನಾನು ತಿಂದಿರೋದು ಕೋಳಿ ಮಾಂಸ, ಕುರಿ ಮಾಂಸ, ಆಡಿನ ಮಾಂಸ ಮಾತ್ರ. ಆದರೆ ನಮ್ಮ ಆಹಾರ ಪದ್ಧತಿ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಆಹಾರ ನನ್ನ ಹಕ್ಕು ಅದನ್ನ ಪ್ರಶ್ನಿಸೋಕೆ ಇವರು ಯಾರು ಎಂದು ಪ್ರಶ್ನಿಸಿದರು..
ಗೋಮಾಂಸ ತಿನ್ನೋದೆ ಸಾಧನೆ ಅಂತ ಅನ್ಕೋಂಡಿದ್ದಾರೆ ಎಂಬ ಯಡಿಯೂರಪ್ಪನವರ ಹೇಳಿಕೆ ಬಗ್ಗೆ ಮಾತನಾಡಿ, ನಾನೇನು ಅವರ ಥರ ಸೊಪ್ಪು ತಿನ್ನಬೇಕಾ..? ನಾನು ಸೊಪ್ಪು ಬೇಕು ಎಂದ್ರೆ ಸೊಪ್ಪು ತಿಂತೀನಿ.
ಮಾಂಸ ಬೇಕು ಅಂದ್ರೆ ಮಾಂಸ ತಿಂತೀನಿ. ನಾನೇನಾದ್ರೆ ನಿಮಗೆ ಇದೆ ಆಹಾರ ತಿನ್ನಿ ಎಂದು ಹೇಳಿದ್ದೀನಾ.. ಎಂದು ಪ್ರಶ್ನಿಸಿದರು.
ದನದ ಮಾಂಸ ತಿನ್ನುವ ಬಗ್ಗೆ ಶ್ಲೋಕವೇ ಇದೆ. ಅದು ನನಗೆ ನೆನಪಾಗುತ್ತಿಲ್ಲ, ಆಮೇಲೆ ನೆನಪು ಮಾಡ್ಕೊಂಡು ಹೇಳುತ್ತೇನೆ.
ಶ್ಲೋಕ ಬರೆದಿರೋದು ಯಾರು ಸಂಸ್ಕøತ ಗೊತ್ತಿರೋರೆ. ಹಾಗಾದ್ರೆ ಶ್ಲೋಕದಲ್ಲಿ ತಪ್ಪು ಇದೆಯಾ..? ಒಳ್ಳೆಯ ದನದ ಮಾಂಸ ತಿಂದರೇ ಆರೋಗ್ಯ ಚೆನ್ನಾಗಿರುತ್ತೆ ಅಂತ ಆ ಶ್ಲೋಕದಲ್ಲಿ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









