Siddaramaiah | ಟಗರಿನ ವೀರ ಕುಣಿತ | ಸಖತ್ ಸ್ಟೆಪ್ ಹಾಕಿದ ಮಾಜಿ ಸಿಎಂ..!
ಹುಟ್ಟೂರು ಸಿದ್ದರಾಮಯ್ಯನ ಹುಂಡಿಯಲ್ಲಿ ಸಿದ್ದರಾಮಯ್ಯ ಸ್ಟೆಪ್ಸ್
ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಾಜಿ ಸಿಎಂ ಡ್ಯಾನ್ಸ್
ಗ್ರಾಮಸ್ಥರ ಜೊತೆ ಸುದೀರ್ಘವಾಗಿ ಡ್ಯಾನ್ಸ್ ಮಾಡಿದ ಸಿದ್ದರಾಮಯ್ಯ
ಸುಮಾರು 40 ನಿಮಿಷಗಳ ಕಾಲ ಕುಣಿದು ಕುಪ್ಪಳಿದ ಸಿದ್ದರಾಮಯ್ಯ
ಮೈಸೂರು : ಹುಟ್ಟೂರು ಸಿದ್ದರಾಮಯ್ಯನ ಹುಂಡಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ನೇಹಿತರ ಜೊತೆ ಕುಳಿದಿದ್ದಾರೆ.
ಸಿದ್ದರಾಮಯ್ಯನ ಹುಂಡಿಯಲ್ಲಿ ಸಿದ್ದರಾಮೇಶ್ವರನ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು.
ಇದರಲ್ಲಿ ಭಾಗಿಯಾದ ಸಿದ್ದರಾಮಯ್ಯನವರು ಪೂಜೆಯ ನಂತರ ಸುಮಾರು 40 ನಿಮಿಷಗಳ ಕಾಲ ಕುಣಿದು ಸಂಭ್ರಮಿಸಿದರು.
ಇದೇ ವೇಳೆ ಊರಿನ ಗ್ರಾಮಸ್ಥರು ‘ಬಂದಾನಪ್ಪೋ ಬಂದಾನು, ಸಿದ್ದರಾಮಯ್ಯ ಬಂದಾನು, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದು ಘೋಷಣೆ ಮೊಳಗಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಾನು ಮೂಲತಃ ಇದೇ ಊರಿನವನು, ಮೊದಲಿನಿಂದಲೂ ಊರಿನೊಂದಿಗೆ ನಿಕಟ ಸಂಪರ್ಕ ಇರಿಸಿಕೊಂಡಿದ್ದೇನೆ.
ಜಾತ್ರೆಯಲ್ಲಿ ಪಾಲ್ಗೊಳ್ಲುವುದನ್ನು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ. ಹಿಂದೆ ಸಚಿವನಾಗಿದ್ದಾಗಲೂ ಬಂದಿದ್ದೆ, ಮುಖ್ಯಮಂತ್ರಿಯಾಗಿದ್ದಾಗಲೂ ಬಂದಿದ್ದೆ, ಈಗಲೂ ಬಂದಿದ್ದೇನೆ. ಊರಿಗೆ ಬಂದು ಹೋಗೋದೇ ಖುಷಿ ಎಂದರು.