ಸಿಎಂ ಸ್ಥಾನ ಪೇಮೆಂಟ್ ಸೀಟಾ ? ಯಡಿಯೂರಪ್ಪ, ಬೊಮ್ಮಾಯಿ ಎಷ್ಟು ಕೊಟ್ರು ? ಸಿದ್ದರಾಮಯ್ಯ ಪ್ರಶ್ನೆ…
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಆಗಲು 2,500 ಕೋಟಿ ಕೇಳಿದ್ದರು ಎಂದು ಹೇಳಿಕೆ ನೀಡಿದ್ದಾರೆ ಆದರೆ ಯಾರು ಕೇಳಿದರು,ಎಲ್ಲಿಂದ ಬಂದು ಕೇಳಿದರು, ಎಂಬುದನ್ನ ಬಹಿರಂಗ ಪಡಿಸಿಲ್ಲ, ಬಿ.ಎಸ್. ಯಡಿಯೂರಪ್ಪ ಎಷ್ಟು ದುಡ್ಡು ಕೊಟ್ಟು ಸಿಎಂ ಆದರು, ಬಸವರಾಜ್ ಬೊಮ್ಮಾಯಿ ಎಷ್ಟು ದುಡ್ಡು ಕೊಟ್ಟು ಸಿ ಎಂ ಆದರು ಎನ್ನುವುದನ್ನ ಬಹಿರಂಗ ಪಡಿಸಲಿ ಎಂದು ಮಾಜಿ ಸಿ ಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಆಡೋದು ಬೇಡ ಸಿ ಎಂ ಆಗಲು ಅವರಿಗೆ ಯಾರು ದುಡ್ಡು ಕೇಳಿದ್ದಾರೆ ಅಂತಾ ಅವರನ್ನೇ ಕೇಳಿ , ನಾನು ಐದು ಪೈಸೆ ಖರ್ಚು ಮಾಡದೇ ಯಾರಿಗೂ ಒಂದು ಕಪ್ ಚಹಾ ಸಹಿತ ಕುಡಿಸದೇ ನಾನು ಮುಖ್ಯಮಂತ್ರಿ ಆಗಿದ್ದೆ.
ಶಾಸಕಾಂಗದ ಪಕ್ಷದ ಸಭೆಯಲ್ಲಿ ನನ್ನನ್ನೆ ಆಯ್ಕೆ ಮಾಡಿದ್ದರು ಹೈಕಮಾಂಡ್ ಸಹ ನನ್ನನ್ನೆ ಆಯ್ಕೆ ಮಾಡಿತ್ತು ಎನ್ನುವ ಮೂಲಕ ಬಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.