ADVERTISEMENT
Saturday, October 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸಿದ್ದರಾಮಯ್ಯ ಟಿಪ್ಪು ಸುಲ್ತಾನ್ ಆರಾಧಕ : ಸಿ.ಟಿ.ರವಿ ಟಾಂಗ್

Mahesh M Dhandu by Mahesh M Dhandu
September 29, 2021
in Newsbeat, Politics, ರಾಜಕೀಯ
Share on FacebookShare on TwitterShare on WhatsappShare on Telegram

ಸಿದ್ದರಾಮಯ್ಯ ಟಿಪ್ಪು ಸುಲ್ತಾನ್ ಆರಾಧಕ : ಸಿ.ಟಿ.ರವಿ ಟಾಂಗ್

ಬೆಂಗಳೂರು : ಟ್ವಿಟ್ಟರ್ ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಟ್ವೀಟ್ ವಾರ್ ಮುಂದುವರೆದಿದೆ.

Related posts

‘ಪ್ರೇಮದ ಊರಲಿ’ ಬ್ಲಾಕ್‌ಬಸ್ಟರ್ ಓಟಕ್ಕೆ ‘ರಾಕಿಂಗ್ ಸ್ಟಾರ್’ ಫಿದಾ: ಚಿತ್ರತಂಡವನ್ನು ಖುದ್ದಾಗಿ ಭೇಟಿಯಾಗಿ ಅಭಿನಂದಿಸಿದ ಯಶ್!

October 16, 2026
saakshatv-r-ashoka-congress-government-disability-pension-salary-hike-demand

ವಿಕಲಚೇತನರ ಹಣಕ್ಕೆ ಕೈ ಹಾಕಿದ ಕಾಂಗ್ರೆಸ್‌ ಸರ್ಕಾರ, ವೇತನ ಹೆಚ್ಚಳ ಮಾಡಬೇಕು, ಪಿಂಚಣಿ ನೀಡಬೇಕು: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ

October 16, 2026

ಆರ್ ಎಸ್ ಎಸ್ ಎಂದ ಕೂಡಲೇ ಉರಿದುಬೀಳುವ ಸಿ.ಟಿ.ರವಿ ಅವರೇ, ಆರ್ ಎಸ್ ಎಸ್ ಎಂದರೆ ಏನು? ಅದರ ಜೊತೆ ಬಿಜೆಪಿ ಸಂಬಂಧ ಏನು? ಆರ್ ಎಸ್ ಎಸ್ ಎಂದರೆ ಏನು ಸಾಮಾಜಿಕ ಸೇವಾ ಸಂಘಟನೆಯೇ? ಸಾರ್ವಜನಿಕ ದತ್ತಿಯೇ? ಇಲ್ಲವೇ ಬಿಜೆಪಿ ಎಂಬ ರಾಜಕೀಯ ಪಕ್ಷಕ್ಕೆ ನಾಯಕರನ್ನು ಉತ್ಪಾದಿಸಿ ಕೊಡುವ ಕಾರ್ಖಾನೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಸಿ.ಟಿ.ರವಿ, ಸಿದ್ದರಾಮಯ್ಯನವರೇ, ಆರ್‍ಎಸ್‍ಎಸ್ ಅಂದರೇನು ಎಂಬುದು ನಿಮ್ಮ ಘನ ಹೃದಯಕ್ಕೆ ಅರ್ಥವಾಗಬೇಕಾದರೆ ಮೊದಲು ನೀವು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗೆ ಬರಬೇಕು.

ಆರ್‍ಎಸ್‍ಎಸ್ ಎಂಬುದನ್ನು ಹೊರಗಿನಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಏಕೆಂದರೆ ಅದು ಕೊಡುವ ಶಿಕ್ಷಣ, ಪ್ರೇರಣೆಯನ್ನು ಹತ್ತಿರದಿಂದ ನೋಡಿದಾಗ ನಿಮಗೆ ಅರ್ಥವಾಗಬಹುದು.

ನೀವು ಹತ್ತಿರಕ್ಕೆ ಬರದೇ ಸಂಘವನ್ನು ನೋಡುವುದು ‘ಅಂಧ ಆನೆಯನ್ನು ಮುಟ್ಟಿ ವರ್ಣಿಸಿದಂತಾಗುತ್ತದೆ’ ಆಗುತ್ತದೆ. ಹೀಗಾಗಿ ನೀವು ಸಂಘದ ಶಾಖೆಗೆ ಬನ್ನಿ ಸಂಘದ ಬಾಗಿಲು ನಿಮಗಾಗಿ ಸದಾ ತೆರೆದಿರುತ್ತದೆ.

Siddaramaiah saaksha tv
ನಿಮ್ಮ ಪಕ್ಷದಲ್ಲೇ ಕೇಂದ್ರದಲ್ಲಿ ವಿತ್ತ ಸಚಿವರಾಗಿ, 40 ವರ್ಷ ರಾಜಕೀಯ ಜೀವನದಲ್ಲಿ ಇದ್ದು 13ನೇ ರಾಷ್ಟ್ರಪತಿಯಾಗಿ ನಿಧನರಾದ ಪ್ರಣವ್ ಮುಖರ್ಜಿ ಅವರ ಜೀವನ ಚರಿತ್ರೆಯನ್ನು ಒಮ್ಮೆ ಓದಿ ಸಿದ್ದರಾಮಯ್ಯನವರೇ. ಆರ್‍ಎಸ್‍ಎಸ್ ಅಂದರೇನು ಎಂಬುದನ್ನು ಅವರು ವಿವರಿಸಿದ್ದಾರೆ. ಆಗಲಾದರೂ ಆರ್‍ಎಸ್‍ಎಸ್ ಬಗ್ಗೆ ನಿಮ್ಮ ಧೋರಣೆ ಬದಲಾಗಬಹುದು.

ಯುದ್ಧ,ಪ್ರವಾಹಗಳು ಈ ದೇಶದ ಯಾವುದೇ ಮೂಲೆಯಲ್ಲಿ ಘಟಿಸಿದಾಗ ಅಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತರು ಮೊದಲು ಹಾಜರಾಗಿ ಸಂಕಷ್ಟದಲ್ಲಿರುವ ಜನರಿಗೆ ಸಾಹಾಯದ ಹಸ್ತವನ್ನು ಚಾಚುತ್ತಾರೆ. ಸ್ವಯಂಸೇವಕರು ತಮ್ಮ ಪ್ರಾಣವನ್ನು ಪಣವಾಗಿಟ್ಟು ರಕ್ಷಣೆ ಮಾಡುತ್ತಾರೆ. ಸಂಘದ ನಿಸ್ವಾರ್ಥ ಸೇವೆಯನ್ನು ತಾಲಿಬಾನಿಗೆ ಹೋಲಿಸಲು ನಿಮಗೆ ಮನಸ್ಸಾದರೂ ಹೇಗೆ ಬಂತು?

ಇತ್ತೀಚೆಗೆ ಯಾಕೋ ನಿಮ್ಮ ನಾಲಗೆಯ ಮೇಲೆ ತಾಲಿಬಾನಿ ಪದ ಹೆಚ್ಚು ಬಳಕೆಯಾಗುತ್ತಿದೆ. ನೀವೇನಾದರೂ ಅಲ್ಲಿಗೆ ಹೋಗುವ ಮನಸ್ಸು ಮಾಡಿದ್ದರೆ ಹೇಳಿ ಬಿಡಿ. ನಿಮ್ಮ ಮನೆಗೆ ನಾವು ಬಂದು ಅಲ್ಲಿಯ ಬಿಕ್ಕಟ್ಟು ಸಂಘದ ಸ್ವಾತಂತ್ರ್ಯದ ಬಗ್ಗೆ ಎಳೆ ಎಳೆಯಾಗಿ ವಿವರಿಸುತ್ತೇವೆ.
ಏನಂತೀರಿ ಟಿಪ್ಪು ಸುಲ್ತಾನ್ ಆರಾಧಕ ಸಿದ್ದರಾಮಯ್ಯನವರೇ?

ಕೊನೆಯದಾಗಿ, ನಾನೇನು ಎಂಬುದು ಚಿಕ್ಕಮಗಳೂರಿನ ನನ್ನ ಜನರಿಗೆ, ನನ್ನ ಜೊತೆ ಇರುವ ಕಾರ್ಯಕರ್ತರಿಗೆ ಗೊತ್ತು. ‘ಸ್ನೇಹಿತರೊಟ್ಟಿಗೆ ಸೇರಿ ಕುಡಿದು ತೇಲಾಡುತ್ತಿದ್ದವರು ಯಾರು ಎಂದು ಮೈಸೂರಿನ ನಾಗರೀಕರು ಈಗಲೂ ಮರೆತಿರಲಿಕ್ಕಿಲ್ಲ. ಒಮ್ಮೆ ಕೇಳಿ ನೋಡಿ ಸಿದ್ದರಾಮಯ್ಯನವರೇ.

ಬಿಜೆಪಿ ಮತ್ತು ಆರ್‍ಎಸ್‍ಎಸ್‍ಗೂ ಏನು ಸಂಬಂಧ ಎಂದು ಕೇಳಿದ್ದೀರಲ್ಲವೇ? ತಾಯಿ ಮತ್ತು ಮಕ್ಕಳ ಸಂಬಂಧ. ಅದು ಕಾರ್ಖಾನೆಯಲ್ಲ. ದೇಶವನ್ನು ಸಂಘಟಿಸಲು ಮತ್ತು ಗಟ್ಟಿಯಾಗಿ ಭಾರತವನ್ನು ಕಟ್ಟಲು ಕಾರ್ಯಕರ್ತರನ್ನು ರೂಪಿಸುವ ಶಿಸ್ತುಬದ್ಧ ಗರಡಿ ಮನೆ.
ಈ ದೇಶ ಜಾತ್ಯಾತೀತ ತತ್ವಗಳ ಮೇಲೆ ನಿಂತಿದೆ, ಸಂಘ ಯಾರನ್ನೂ ಗುತ್ತಿಗೆ ಪಡೆದಿಲ್ಲ.

ನಿಮ್ಮ ಪಕ್ಷದ ಉಳಿಗೆ ಮಾನ್ಯ ಪದ್ಧತಿಯನ್ನು ನೀವು ತೋರಿಸಿಕೊಟ್ಟಿದ್ದೀರಿ. ದೇಶ ಸೇವೆ ಮಾಡಬೇಕೆಂದರೆ ರಾಜಕೀಯಕ್ಕೆ ಬರಬೇಕೆಂದಿಲ್ಲ ಸಿದ್ದರಾಮಯ್ಯನವರೇ. ಬಲಹೀನರಿಗೆ ಬೆಳಕಾಗಲು ಸಂಘ ಕೊಟ್ಟ ಕೊಡುಗೆಗಳನ್ನು ನಾವು ತಿಳಿಸುತ್ತೇವೆ, ಒಮ್ಮೆ ಸಂಘದ ಶಾಖೆಗೆ ಬನ್ನಿ ಎಂದು ಸಿ.ಟಿ.ರವಿ ಬರೆದುಕೊಂಡಿದ್ದಾರೆ.

Tags: #Saaksha TVBJPC T RavicongrressSiddaramaiah
ShareTweetSendShare
Join us on:

Related Posts

‘ಪ್ರೇಮದ ಊರಲಿ’ ಬ್ಲಾಕ್‌ಬಸ್ಟರ್ ಓಟಕ್ಕೆ ‘ರಾಕಿಂಗ್ ಸ್ಟಾರ್’ ಫಿದಾ: ಚಿತ್ರತಂಡವನ್ನು ಖುದ್ದಾಗಿ ಭೇಟಿಯಾಗಿ ಅಭಿನಂದಿಸಿದ ಯಶ್!

by admin
October 16, 2026
0

​ ಬೆಂಗಳೂರು : ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಸಂಚಲನ ಮೂಡಿಸಿರುವ ‘ಪ್ರೇಮದ ಊರಲಿ’ ಚಿತ್ರದ ಅಭೂತಪೂರ್ವ ಯಶಸ್ಸಿಗೆ ರಾಕಿಂಗ್ ಸ್ಟಾರ್ ಯಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್‌ನಲ್ಲಿ...

saakshatv-r-ashoka-congress-government-disability-pension-salary-hike-demand

ವಿಕಲಚೇತನರ ಹಣಕ್ಕೆ ಕೈ ಹಾಕಿದ ಕಾಂಗ್ರೆಸ್‌ ಸರ್ಕಾರ, ವೇತನ ಹೆಚ್ಚಳ ಮಾಡಬೇಕು, ಪಿಂಚಣಿ ನೀಡಬೇಕು: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ

by admin
October 16, 2026
0

ರಾಮನಗರ, ಗ್ಯಾರಂಟಿಗಳಿಗಾಗಿ ಎಲ್ಲ ಸೌಲಭ್ಯಗಳನ್ನು ಕಡಿತ ಮಾಡಿರುವ ಕಾಂಗ್ರೆಸ್‌ ಸರ್ಕಾರ, ಈಗ ಅಂಗವಿಕಲರ ಪಿಂಚಣಿ ಹಣಕ್ಕೂ ಕೈ ಹಾಕಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು....

saakshatv-instamart-qim-sale-2026-beauty-products-festival-discounts

ಇನ್‌ಸ್ಟಾಮಾರ್ಟ್ QIM ಸೇಲ್ 2026: ಹಬ್ಬದ ಸೀಸನ್‌ಗೆ ಬ್ಯೂಟಿ ಪ್ರಾಡಕ್ಟ್‌ಗಳ ಮೇಲೆ ಬಂಪರ್‌ ರಿಯಾಯಿತಿ

by admin
October 16, 2026
0

ಬೆಂಗಳೂರು: ದಸರಾ ಸಂಭ್ರಮ, ದೀಪಾವಳಿ ಪಾರ್ಟಿ, ಹಬ್ಬದ ಭೋಜನ ಹಾಗೂ ಸಂಭ್ರಮಕ್ಕೆ ತಯಾರಾಗಲು ಇನ್‌ಸ್ಟಾಮಾರ್ಟ್ ತನ್ನ 'ಕ್ವಿಕ್ ಇಂಡಿಯಾ ಮೂವ್ಮೆಂಟ್' (ಕ್ಯೂಐಎಂ) ಸೇಲ್ 2026 ಅನ್ನು ಆರಂಭಿಸಿದೆ....

ಜಿಯೋ ಐಪಿಒ ಬಗ್ಗೆ ವಿಶ್ಲೇಷಕರು ಪಾಸಿಟಿವ್; ಲಿಸ್ಟಿಂಗ್‌ನಲ್ಲಿ ಶೇ 15-20ರಷ್ಟು ಲಾಭದ ನಿರೀಕ್ಷೆ

by admin
October 16, 2026
0

ಮುಂಬೈ,: ಜಿಯೋ ಪ್ಲಾಟ್‌ಫಾರ್ಮ್ಸ್‌ನ ಪ್ರೈಸ್ ಬ್ಯಾಂಡ್ (ಬೆಲೆ ಶ್ರೇಣಿ) ಪ್ರಕಟವಾದ ನಂತರ ವಿಶ್ಲೇಷಕರ ಅಭಿಪ್ರಾಯಗಳು ಬಹುತೇಕ ಉತ್ಸಾಹದಿಂದ ಕೂಡಿದೆ. ಹಲವು ವರದಿಗಳು ಐಪಿಒಗೆ ಧನಾತ್ಮಕ ಮೌಲ್ಯಮಾಪನ ನೀಡಿವೆ....

saakshatv-bengaluru-vancouver-airports-sister-airport-agreement-direct-flights

ಕೆನಡಾದ ವ್ಯಾಂಕೋವರ್ – ಬೆಂಗಳೂರು ಏರ್‌ಪೋರ್ಟ್‌ಗಳ ನಡುವೆ ಐತಿಹಾಸಿಕ ಒಪ್ಪಂದ, ನೇರ ವಿಮಾನ ಸೇವೆಗೆ ಭದ್ರ ಬುನಾದಿ!

by admin
October 16, 2026
0

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಬಿಎಲ್‌ಆರ್‌) ಮತ್ತು ಕೆನಡಾದ ವ್ಯಾಂಕೋವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ವೈವಿಆರ್‌) ನಡುವೆ ಐತಿಹಾಸಿಕ 'ಸಿಸ್ಟರ್ ಏರ್‌ಪೋರ್ಟ್' ಒಪ್ಪಂದಕ್ಕೆ ಸಹಿ ಹಾಕಲಾಗಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram