Siddaramaiah ಚಿನ್ನದ ನಾಡಲ್ಲಿ ಹುಲಿಯಾಗೆ ಅದ್ಧೂರಿ ಸ್ವಾಗತ Siddaramaiah
ಕೋಲಾರ : ಚಿನ್ನದ ನಾಡು ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.
ಕೋಲಾರದಲ್ಲಿ ಇಂದು ಅಹಿಂದ ಸಮಾವೇಶವನ್ನ ಹಮ್ಮಿಕೊಳ್ಳಲಾಗಿತ್ತು.
ಈ ಹಿನ್ನೆಲೆ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಭೇಟಿ ನೀಡಿದ್ದು, ಮಾಜಿ ಸಿಎಂ ಸಿದ್ದರಾಮಯ್ಯರನ್ನು ರಾಮಸಂದ್ರ ಗೇಟ್ ಬಳಿ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.
ಸಿದ್ದರಾಮಯ್ಯಗೆ ಬೆಳ್ಳಿಯ ಗದೆ ಕೊಟ್ಟು, ಬೃಹತ್ ಹಾರ ಹಾಕಿ ಕಾಂಗ್ರೆಸ್ ಕಾರ್ಯಕರ್ತರು ಕೋಲಾರಕ್ಕೆ ಬರಮಾಡಿಕೊಂಡರು. Siddaramaiah

ಕೋಲಾರಕ್ಕೆ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಜೈಕಾರ ಹಾಕಿದ್ರು.
ಬಳಿಕ ಸಿದ್ದರಾಮಯ್ಯ ಕೋಲಾರ ಹೊರವಲಯದಲ್ಲಿರುವ ಕೊಂಡರಾಜನಗಳ್ಳಿ ಬಳಿಯಿರುವ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಬಳಿಕ ಕ್ಲಾಕ್ ಟವರ್ ಬಳಿಯಿರುವ ದರ್ಗಾಗೆ ಭೇಟಿ ನೀಡಿದರು.
