ಕಾಂಗ್ರೆಸ್ ವಿರೋಧ ಪಕ್ಷದಲ್ಲಿರಲು ಸಿದ್ದರಾಮಯ್ಯರ ಅಹಂಕಾರ ಕಾರಣ : ಸಿ.ಸಿ.ಪಾಟೀಲ್
ಚಾಮರಾಜನಗರ : ಗೋಮಾಂಸ ತಿನ್ನುವ ಹೇಳಿಕೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯ ಬಿಜೆಪಿ ನಾಯಕರು ತಿರುಗಿ ಬಿದ್ದಿದ್ದಾರೆ. ಒಬ್ಬರಾದ ಮೇಲೋಬ್ಬರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಅದರಂತೆ ಇದೀಗ ಸಚಿವ ಸಿ.ಸಿ.ಪಾಟೀಲ್ ಸಿದ್ದರಾಮಯ್ಯರ ಅಹಂಕಾರದ ಮಾತುಗಳಿಂದಲೇ ಬಹುಮತದಿಂದ ಇದ್ದ ಕಾಂಗ್ರೆಸ್ ಸರ್ಕಾರ ಇಂದು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವಂತಾಗಿದೆ ಎಂದು ಟೀಕಿಸಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಹಿರಿಯ ನಾಯಕರಾಗಿದ್ದಾರೆ. ಒಂದು ವರ್ಗದ ಜನರ ಭಾವನೆಗೆ ನೋವುಂಟು ಮಾಡುವಂತೆ ಮಾತನಾಡುವುದು ಅವರಿಗೆ ಶೋಭೆತರುವಂತಹದ್ದಲ್ಲ.
ಗೋಮಾಂಸ ತಿನ್ನುವ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಅವರಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು ಎನ್ನುವ ಆಸೆ ಇದೆ. ಅವರ ಪಕ್ಷದಲ್ಲಿರುವ ಒಳ ಜಗಳಗಳಿಂದ ಸಿದ್ದರಾಮಯ್ಯ ಅವರು ಇಂತಹ ಮಾತುಗಳನ್ನು ಆಡುತ್ತಿದ್ದಾರೆ ಎಂದು ಆರೋಪಿಸಿದರು.
ತಾಕತ್ತಿದ್ದರೇ ಗೋಮಾಂಸ ರಫ್ತು ನಿಷೇಧಿಸಿ : ಬಿಜೆಪಿಗೆ ಸಿದ್ದರಾಮಯ್ಯ ಸವಾಲ್
ಇದೇ ವೇಳೆ ಧರ್ಮೇಗೌಡ ಆತ್ಮಹತ್ಯೆ ವಿಚಾರವಾಗಿ ಮಾತನಾಡಿ, ಧರ್ಮೇಗೌಡ ಅವರ ಆತ್ಮಹತ್ಯೆ ಬಹಳ ನೋವಿನ ಸಂತಿಯಾಗಿದೆ. ಅವರೇನು ಪುಕ್ಕಲ ರಾಜಕಾರಣಿಯಲ್ಲ.
ಹೋರಾಟಗಳಿಂದ ಬೆಳೆದು ಬಂದು ರಾಜಕೀಯ ಪ್ರವೇಶ ಮಾಡಿದ ಧೀಮಂತ ರಾಜಕಾರಣಿ. ಅವರ ಸಾವು ದುರ್ದೈವದ ಸಂಗತಿಯಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









